RNI NO. KARKAN/2006/27779|Wednesday, October 15, 2025
You are here: Home » breaking news » ಘಟಪ್ರಭಾ:ಎಲ್ಲ ದಾನಗಳಲ್ಲಿ ವಿದ್ಯಾ ದಾನ ಶ್ರೇಷ್ಠವಾಗಿದ್ದು : ಸೀತವ್ವಾ ಜೋಡಟ್ಟಿ

ಘಟಪ್ರಭಾ:ಎಲ್ಲ ದಾನಗಳಲ್ಲಿ ವಿದ್ಯಾ ದಾನ ಶ್ರೇಷ್ಠವಾಗಿದ್ದು : ಸೀತವ್ವಾ ಜೋಡಟ್ಟಿ 

ಎಲ್ಲ ದಾನಗಳಲ್ಲಿ ವಿದ್ಯಾ ದಾನ ಶ್ರೇಷ್ಠವಾಗಿದ್ದು : ಸೀತವ್ವಾ ಜೋಡಟ್ಟಿ

ಘಟಪ್ರಭಾ ಜ 21 : ಎಲ್ಲ ದಾನಗಳಲ್ಲಿ ವಿದ್ಯಾ ದಾನ ಶ್ರೇಷ್ಠವಾಗಿದ್ದು, ಅದನ್ನು ಗ್ರಾಮೀಣ ಭಾಗದ ಮಕ್ಕಳಿಗೆ ಅತಿ ಉತ್ತಮ ರೀತಿಯಿಂದ ಮಾಡುತ್ತಿರುವ ನೀಡ್ಸ್ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಶ್ರೀಮತಿ ಸೀತವ್ವಾ ಜೋಡಟ್ಟಿ ಹೇಳಿದರು.
ಅವರು ಸ್ಥಳೀಯ ನೀಡ್ಸ್ ಶಿಕ್ಷಣ ಸಂಸ್ಥೆಯ ಶ್ರೀಮತಿ ಅಕ್ಕುತಾಯಿ ಆದರ್ಶ ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆ ಇದರ 13 ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಶ್ರೀ ಜಿ.ಬಿ ಬಡಕುಂದ್ರಿ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ 3 ನೇ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದರು. ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಬೇಕು. ಸಮಾಜದಲ್ಲಿ ಪ್ರಮಾಣಿಕವಾಗಿ ಸೇವೆ ಮಾಡುವವರಿಗೆ ಯಾವಾಗಲೂ ಗೌರವವಿದೆ. ನನ್ನ ಅಲ್ಪ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ನನಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು.


ಜೆ.ಜಿ.ಆಸ್ಪತ್ರೆಯ ನೂತನ ನಿರ್ದೇಶಕರಾದ ಸುರೇಶ ಕಾಡದವರ ಸನ್ಮಾನ ಸ್ವೀಕರಿಸಿ ಮಾತನಾಡಿ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಉತ್ತಮ ಗುಣ ಮಟ್ಟದ ಶಿಕ್ಷಣ ನೀಡುವ ಸದುದ್ದೇಶದಿಂದ ಸಂಸ್ಥೆಯ ಅಧ್ಯಕ್ಷರಾದ ಅರವಿಂದ ಬಡಕುಂದ್ರಿಯವರು ಪ್ರಾರಂಭಿಸಿದ ಶಾಲೆಯು ಅವರ ಪರಿಶ್ರಮದಿಂದ ಸಾಕಷ್ಟು ಬೆಳೆದಿದೆ. ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯವನ್ನು ಹೊಂದಿದೆ. ಸಂಸ್ಥೆ ಉತ್ತರೋತ್ತರ ಅಭಿವೃದ್ದಿ ಹೊಂದಲೆಂದು ಶುಭ ಹಾರೈಸಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ ಭರತೇಶ ವಿದ್ಯಾಲಯದ ಶಿಕ್ಷಕ ಎಸ್.ಬಿ.ಮುನ್ನೋಳ್ಳಿ ಅವರು ಮಕ್ಕಳಿಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶ್ರೀ ಅನ್ನದಾನೇಶ್ವರ ದೇವರು ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಅರವಿಂದ ಬಡಕುಂದ್ರಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಎಲ್ಲ ಉಪನ್ಯಾಸಕರು, ಶಿಕ್ಷಕಿಯರು ಮತ್ತು ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿಯರು, ಮತ್ತು ಪಾಲಕರು ಉಪಸ್ಥಿತರಿದ್ದರು. ಶಾಲಾ ಮಕ್ಕಳಿಂದ ಅನೇಕ ಸಾಂಸ್ಕøತಿಕ ಕಾರ್ಯಕ್ರಮ ಜರಗಿದವು.
ಕಾರ್ಯಕ್ರಮವನ್ನು ಉಪನ್ಯಾಸಕಿ ಜಿ.ಬಿ.ಚೌಗಲಾ ನಿರೂಪಿಸಿ ವಂದಿಸಿದರು.

Related posts: