ಘಟಪ್ರಭಾ:ಶ್ರೀ ನಿಜಗುಣ ದೇವರ ಸಾಧನ ಸಂಭ್ರಮಕ್ಕೆ ಅದ್ದೂರಿ ಚಾಲನೆ
ಶ್ರೀ ನಿಜಗುಣ ದೇವರ ಸಾಧನ ಸಂಭ್ರಮಕ್ಕೆ ಅದ್ದೂರಿ ಚಾಲನೆ
ಶೃಂಗಾರ ರಥದಲ್ಲಿ ಮಹಾತ್ಮರ ಸ್ವಾಗತ, ಕಣ್ಣನ ಸೆಳೆದ ಜಾನಪದ ಕಲಾ ತಂಡಗಳು
ಘಟಪ್ರಭಾ ಜ 1 : ಸಮೀಪದ ಸುಕ್ಷೇತ್ರ ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಪೂಜ್ಯ ಶ್ರೀ ನಿಜಗುಣ ದೇವರ 25ನೇ ವರ್ಷದ ಸಾಧನ ಸಂಭ್ರಮಕ್ಕೆ ಮಂಗಳವಾರದಂದು ಅದ್ದೂರಿಯಾಗಿ ಚಾಲನೆ ನೀಡಲಾಯಿತು.
ಸುಕ್ಷೇತ್ರ ಮಹಾಧ್ವಾರದ ಉದ್ಘಾಟನೆ ಜರುಗಿತು. ಮಹಾಧ್ವಾರದಿಂದ ಶ್ರೀಮಠಕ್ಕೆ ಮಹಾತ್ಮರನ್ನು ಶೃಂಗಾರ ರಥದಲ್ಲಿ ಕನೇರಿಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಜಿ, ಚಿತ್ರದುರ್ಗದ ಶ್ರೀ ಶಿವಲಿಂಗಾನಂದ ಮಹಾಸ್ವಾಮಿಜಿ, ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿ ಅವರನ್ನು ಸಹಸ್ರ ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಜಾನಪದ ಕಲಾತಂಡಗಳೊಂದಿಗೆ ಮಹಾತ್ಮರ ಭವ್ಯ ಮೆರವಣಿಗೆ ಜರುಗಿತು.
ಬೆಂಡ್ ಕಂಪನಿ, ಭಜನೆ, ಜಗ್ಗಲಗಿ, ಕರಬಲ್, ಜೊಕ್ಕಾನಟ್ಟಿಯ ಶ್ರೀ ಸಿದ್ದಾರೂಢ ಮಹಿಳಾ ಡೊಳ್ಳು ಕುಣಿತ ಜನರ ಕಣ್ಮನ ಸೆಳೆದವು.
ಬೆಳಿಗ್ಗೆ ಶ್ರೀ ಸಿದ್ಧಲಿಂಗ ಯತಿರಾಜರ,ಶ್ರೀ ಶಾಂಭವಿ ಮಾತೆಯ,ಶ್ರೀ ಸಿದ್ಧಲಿಂಗ ಮಹಾರಾಜರ ಮೂರ್ತಿಗಳಿಗೆ ರುದ್ರಾಭಿಷೇಕ ಜರುಗಿತು.ನಂತರ ಸಹಸ್ರ ಮುತೈದೆಯರ ಉಡಿ ತುಂಬುವು ಕಾರ್ಯಕ್ರಮ ಜರುಗಿತು.