RNI NO. KARKAN/2006/27779|Sunday, December 6, 2020
You are here: Home » breaking news » ಗೋಕಾಕ:ಮಾರುತಿ ದೇವರಿಗೆ ಶತ ಶತಮಾನಗಳ ಐತಿಹಾಸಿಕ ಇತಿಹಾಸವಿದೆ : ಅಭಿನವ ಶಿವಾನಂದ ಸ್ವಾಮಿಜಿ

ಗೋಕಾಕ:ಮಾರುತಿ ದೇವರಿಗೆ ಶತ ಶತಮಾನಗಳ ಐತಿಹಾಸಿಕ ಇತಿಹಾಸವಿದೆ : ಅಭಿನವ ಶಿವಾನಂದ ಸ್ವಾಮಿಜಿ 

ಗ್ರಾಮದ ಮಾರುತಿ ದೇವರ ಕಾರ್ತಿಕೋತ್ಸವದಲ್ಲಿ ದೀಪ ಹಚ್ಚುತ್ತಿರುವದು.

ಮಾರುತಿ ದೇವರಿಗೆ ಶತ ಶತಮಾನಗಳ ಐತಿಹಾಸಿಕ ಇತಿಹಾಸವಿದೆ : ಅಭಿನವ ಶಿವಾನಂದ ಸ್ವಾಮಿಜಿ

ಬೆಟಗೇರಿ ಡಿ 30 : ಪ್ರತಿಯೊಬ್ಬ ಮನುಷ್ಯನ ಮನಸ್ಸು ಸದಾ ಪರಿಶುದ್ದವಾಗಿದ್ದರೆ ಆ ವ್ಯಕ್ತಿಯ ಮನೆ-ಮನ ಸದಾ ನಂದಾದೀಪದಂತೆ ಬೆಳಗುತ್ತಿರುತ್ತದೆ. ಹನುಮಂತ ದೇವರು ಎಲ್ಲರ ಇಷ್ಟಾರ್ಥಗಳನ್ನು ಪೂರೈಸುವ ಆರಾಧ್ಯ ದೇವರಾಗಿದ್ದಾನೆ ಎಂದು ಸುಣಧೋಳಿ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಅಭಿನವ ಶಿವಾನಂದ ಸ್ವಾಮಿಜಿ ಹೇಳಿದರು.
ಗ್ರಾಮದ ಮಾರುತಿ ದೇವರ ದೇವಾಲಯದಲ್ಲಿ ಶನಿವಾರದಂದು ರಾತ್ರಿ ನಡೆದ ಕಾರ್ತಿಕೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ, ದೀಪ ಹಚ್ಚಿ ಮಾತನಾಡಿ, ಮಾರುತಿ ದೇವರಿಗೆ ಶತ ಶತಮಾನಗಳ ಐತಿಹಾಸಿಕ ಇತಿಹಾಸವಿದೆ ಎಂದರು.
ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ ಸಮ್ಮುಖ, ರಾಮಣ್ಣ ಬಳಿಗಾರ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ಲಕ್ಷ್ಮಣ ನೀಲನ್ನವರ, ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಮುಖ್ಯಅತಿಥಿಗಳಾಗಿ ಆಗಮಿಸಿದ್ದರು.
ಪತ್ರೆಪ್ಪ ನೀಲನ್ನವರ, ಕಲ್ಲಪ್ಪ ಚಂದರಗಿ, ದುಂಡಪ್ಪ ಹಾಲನ್ನವರ, ಎಂ.ಐ.ನೀಲಣ್ಣವರ, ಮುತ್ತೆಪ್ಪ ವಡೇರ, ರಮೇಶ ಮುಧೋಳ, ವೀರಭದ್ರ ನೀಲನ್ನವರ, ವಿಠಲ ಚಂದರಗಿ, ಶಿವಾಜಿ ನೀಲಣ್ಣವರ, ರಾಜು ಪತ್ತಾರ, ರಮೇಶ ನೀಲನ್ನವರ, ಶಿವು ನಾಯ್ಕರ, ಸ್ಥಳೀಯ ಹಾಗೂ ಸುತ್ತಮುತ್ತಲಿನ ಹತ್ತೂರಿನ ಗಣ್ಯರು, ಗ್ರಾಮಸ್ಥರು, ಭಕ್ತರು, ಕಾರ್ತಿಕೋತ್ಸವ ಆಚರಣಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಉಪಸ್ಥಿತರಿದ್ದರು.
ಸಂಭ್ರಮದ ಕಾರ್ತಿಕೋತ್ಸವ : ಇಲ್ಲಿಯ ಮಾರುತಿ ದೇವರ ಕಾರ್ತಿಕೋತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶನಿವಾರದಂದು ವಿಜೃಂಭನೆಯಿಂದ ನಡೆದವು. ಬೆಳೆಗ್ಗೆ 6 ಗಂಟೆಗೆ ಮಾರುತಿ ದೇವರ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಪೂಜೆ, ಕುಂಕುಮ, ಎಲೆ ಪೂಜೆ ಜರುಗಿ, ಪುರ ಜನರಿಂದ ಪೂಜೆ, ನೈವೈದ್ಯ ಸಮರ್ಪನೆ, ರಾತ್ರಿ 8 ಗಂಟೆಗೆ ದೀಪೋತ್ಸವ, ಸಕಲ ವಾದ್ಯ ಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವ, ಕಾಯಿ, ಕಾರಿಕ ಹಾರಿಸುವ, ಸಿಹಿ ಹಂಚುವದು ವೈಭವದಿಂದ ನಡೆಯಿತು. ಸ್ಥಳೀಯ ಕರಡಿ ಮಜಲು ತಂಡದವರಿಂದ ಕರಡಿ ಮತ್ತು ಕಣಿ ವಾದನ ಎಲ್ಲರ ಗಮನ ಸೆಳೆದವು, ಮಹಾಪ್ರಸಾದ ಜರುಗಿ ಕಾರ್ಯಕ್ರಮ ಸಂಪನ್ನಗೊಂಡಿತು. ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಭಕ್ತಿ, ಭಾವದ ಪರಾಕಷ್ಠೆ ಮರೆದರು.

Related posts: