ಖಾನಾಪುರ:ಮಾಜಿ ಶಾಸಕ ಅರವಿಂದಗೆ ಕಡೆಗಣಿಸಿದ್ದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರಿಂದ ಮನವಿ
ಮಾಜಿ ಶಾಸಕ ಅರವಿಂದಗೆ ಕಡೆಗಣಿಸಿದ್ದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರಿಂದ ಮನವಿ
ಖಾನಾಪುರ ಡಿ 29 : ಖಾನಾಪುರತಾಲೂಕಿನ ನಂದಗಡ ಗ್ರಾಮದಲ್ಲಿ ಬರುವ ೪-೧-೨೦೧೯ರಂದು ಹಮ್ಮಿಕೊಂಡಂತಹ *ರಾಜೀವಗಾಂಧಿ ಸೇವಾ ಕೇಂದ್ರದ ಉದ್ಘಾಟನೆ* ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಆದರೆ ಸ್ಥಳೀಯ ನಿವಾಸಿ ಮಾಜಿ ಶಾಸಕರಾದ ಅರವಿಂದ ಪಾಟೀಲ ಅವರನ್ನು ಕಾರ್ಯಕ್ರಮಕ್ಕೆ ಅಹ್ವಾನಿಸಿಲ್ಲ ಎಂದು ಗ್ರಾಮಸ್ಥರು ಹಾಗೂ ಅವರ ಅಭಿಮಾನಿಗಳು ಗ್ರಾಪಂ ಅಭಿವೃದ್ಧಿ ಅಧಿಕಾರಿ ಗಣೇಶ ಅವರಿಗೆ ಮನವಿನೀಡಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಗ್ರಾಮದ ಇಬ್ರಾಹಿಂ ತಹಶಿಲ್ದಾರ ರವರು, ಮಾಜಿ ಶಾಸಕರಾದ ಅರವಿಂದ ಪಾಟೀಲರು ಸ್ಥಳೀಯ ನಿವಾಸಿಗಳು ಜೋತೆಗೆ ನಂದಗಡ ಗ್ರಾಮವನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದವರು. ನಂದಗಡ ಗ್ರಾಮದ ರಾಜಕೀಯ ಇತಿಹಾಸದಲ್ಲೇ ಇವರು ಶಾಸಕರಾದ ಸಂಧರ್ಭದಲ್ಲಿ ಗ್ರಾಮದ ಅಭಿವೃದ್ಧಿಗಾಗಿ *ಗ್ರಾಮ ವಿಕಾಶ ಯೋಜನೆಯಡಿಯಲ್ಲಿ ೩ಕೋಟಿ ಅನುದಾನ* ಹಾಗೂ *ಅಲ್ಪಸಂಖ್ಯಾತರ ಅನುದಾನದಡಿಯಲ್ಲಿ ೫೦ಲಕ್ಷ ಅನುದಾನ* ನೀಡಿ ಗ್ರಾಮವು ಅಭಿವೃದ್ಧಿಗೊಳ್ಳುವಲ್ಲಿ ಪ್ರಮುಖಪಾತ್ರ ವಹಿಸಿದ್ದಾರೆ. ಇದರ ಜೋತೆಗೆ *ರಾಜೀವಗಾಂಧಿ ಸೇವಾ ಕೇಂದ್ರದ* ಕಟ್ಟಡ ನಿರ್ಮಾಣವಾಗಲು ಪ್ರಮುಖರೆನಿಸಿಕೊಂಡಿದ್ದಾರೆ.
ಇಂತಹ ಜನಮೆಚ್ಚಿನ ನಾಯಕನ್ನು ಸ್ಥಳೀಯ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅಹ್ವಾನಿಸದೇ, ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕದೇ ಕಡೆಗಣಿಸಿದ್ದಾರೆ. ಅದಕ್ಕಾಗಿ ಕಾರ್ಯಕ್ರಮದ ಮುಂಚಿತವಾಗಿ ಮಾಡಿದ ತಪ್ಪನ್ನು ತಕ್ಷಣ ತಿದ್ದಿಕೊಳ್ಳಬೇಕು, ಇಲ್ಲವಾದಲ್ಲೇ ಮುಂದಿನ ಹೋರಾಟ ಮಾಡಲು ನಾವೆಲ್ಲರೂ ಸಿದ್ಧರಿದ್ದೆವೆಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಇಬ್ರಾಹಿಂ ತಾಹಶೀಲ್ದಾರ, ಇರ್ಶಾದ್ ಸೌದಾಗರ,ಶರದ ಹೊನ್ನಾಯಿಕ,ಆಶೀಫ ಬೇಪಾರಿ,ಶಾಹೀನ ಸಯ್ಯದ್,ವಶೀಮ ಕಾಕರ,ಸಮೀರ ಕಾಕರ,ಇಲಾಹಿ ಚಾಪಗಾಂವ,ರವಿ ಪಾಗಾದ,ಅಬರಾರ ಬೇಪಾರಿ,ಸಾಕಿಬ ಮುಜಾಲೆ, ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.