ಮೂಡಲಗಿ:1303ನೇ ಮದ್ಯವರ್ಜನ ಶಿಬಿರದ ಸಮರೋಪ ಸಮಾರಂಭ
1303ನೇ ಮದ್ಯವರ್ಜನ ಶಿಬಿರದ ಸಮರೋಪ ಸಮಾರಂಭ
ಮೂಡಲಗಿ ಡಿ 23 : ಮದ್ಯಪಾನದಂತಹ ಚಟ ಅಂಟಿಸಿಕೊಂಡವರಿಗೆ ಭವಿಷ್ಯದ ಚಿಂತನೆಯಾಗಲಿ, ಕಲ್ಪನೆಯಾಗಲಿ ಇರುವುದಿಲ್ಲ. ಮದ್ಯಪಾನದ ಭೂತ ಶರೀರವನ್ನು ಬಿಟ್ಟು ಹೋದ ಮೇಲೆ ಅದರ ದಾಸರಾಗಿದ್ದವರು ತಮ್ಮನ್ನು ತಾವು ಕಂಡು ಮರುಕ ಪಡುತ್ತಾರೆ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬೆಳಗಾವಿ2 ನಿರ್ದೇಶಕ ಸುರೇಶ ಮೊಯಿಲಿ ಹೇಳಿದರು.
ಅವರು ಸಮೀಪದ ಮಮದಾಪೂರ ಶ್ರೀ ಏಳುಕೋಣಿ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ(ರಿ) ಮೂಡಲಗಿ ವಲಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಬೆಂಗಳೂರು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಮದ್ಯವರ್ಜನ ವ್ಯವಸ್ಥಾಪನ ಸಮಿತಿ, ಕೌಜಲಗಿ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ 1303ನೇ ಮದ್ಯವರ್ಜನ ಶಿಬಿರದ ಸಮರೋಪ ಸಮಾರಂಭದಲ್ಲಿ ಮಾತನಾಡುತ್ತ, ಇತ್ತಿಚಿನ ದಿನಗಳಲ್ಲಿ ಯುವಜನತೆ ದುಶ್ಚಟಕ್ಕೆ ಬಲಿಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯೂ ಜನಸಾಮಾನ್ಯರು ಇಂತಹ ದುಶ್ಚಟಕ್ಕೆ ಬಲಿಯಾಗಬಾರದು ಎಂಬ ಉದ್ದೇಶದಿಂದ ಮದ್ಯವರ್ಜನ ಶಿಬಿರವನ್ನು ನಡೆಸಿಕೊಂಡು ಬಂದಿದೆ. ಇಂತಹ ಕಾರ್ಯಕ್ರಮಗಳು ಸಾವಿರಾರು ಕುಟುಂಬಗಳ ಜೀವನಕ್ಕೆ ಬೆಳಕಾಗಿದ್ದು ಇಂತಹ ಕಾರ್ಯಕ್ರಮಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ದೇವರಾಜ್, ಶಿಬಿರಾಧಿಕಾರಿ ದೇವಿಪ್ರಸಾದ, ಆರೋಗ್ಯ ಸಹಾಯಕಿ ಪ್ರಸಿಲ್ಲಾ, ಈರಪ್ಪ ಸೊಂಡುರ, ಹನುಮಂತ ಗೋಪಾಳಿ, ವiಹಾಂತೇಶ ಜನ್ಮಟ್ಟಿ, ಸದಾಶಿವ ಸೊಂಡುರ,ರವಿ ಕಮತೆ, ಸುರೇಶಗೌಡ ಪಾಟೀಲ ಮತ್ತಿತರರು ಭಾಗವಹಿಸಿದ್ದರು.
ಮಮದಾಪೂರದ ವೇದಮೂರ್ತಿ ಚರಮೂರ್ತೇಶ್ವರ ಮಹಾಸ್ವಾಮಿಜೀ, ಶ್ರೀ ಶಾಂತರೂಡ ಸ್ವಾಮಿಜೀ ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಮದ್ಯವರ್ಜನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುರೇಶಗೌಡ ಪಾಟೀಲ ಅಧ್ಯಕ್ಷತೆವಹಿಸಿದ್ದರು. ಮದ್ಯವರ್ಜನ ಶಿಬಿರದಲ್ಲಿ 93 ಶಿರಾರ್ಥಿಗಳು ಮದ್ಯವರ್ಜಿಸಿ ನವಜೀವನಕ್ಕೆ ಪಾದರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಮೇಲ್ವಿಚಾರಕ ಬಾಬುರಾವ ಗೋಣಿ ನಿರೂಪಿಸಿ ವಂದಿಸಿದರು.