RNI NO. KARKAN/2006/27779|Thursday, April 2, 2026
You are here: Home » breaking news » ಖಾನಾಪುರ:ಕಳಪೆ ಕಾಮಗಾರಿ ಆರೋಪ : ಖಾನಾಪುರ ಬಳಿ ಕೋಚ್ಚಿ ಹೋಯ್ತು ಸೇತುವೆ

ಖಾನಾಪುರ:ಕಳಪೆ ಕಾಮಗಾರಿ ಆರೋಪ : ಖಾನಾಪುರ ಬಳಿ ಕೋಚ್ಚಿ ಹೋಯ್ತು ಸೇತುವೆ 

ಕಳಪೆ ಕಾಮಗಾರಿ ಆರೋಪ : ಖಾನಾಪುರ ಬಳಿ ಕೋಚ್ಚಿ ಹೋಯ್ತು ಸೇತುವೆ 

ಖಾನಾಪುರ ಜು 19: ಖಾನಾಪುರ ತಾಲೂಕಿನಲ್ಲಿ ಭಾರಿ ಮಳೆ ಬೀಳುತ್ತಿರುವ ಹಿನ್ನಲೆಯಲ್ಲಿ ಬೀಡಿ ಗ್ರಾಮದ ತಟ್ಟಿಹಳ್ಳಕ್ಕೆ ನಿರ್ಮಿಸಿದ್ದ ನಾಲಾ ಕಂ ಬ್ರೀಡ್ಜ ಕೋಚ್ಚಿ ಹೋದ ಘಟನೆ ಸಂಭವಿಸಿದೆ

ಕಳೆದ ಆರು ತಿಂಗಳ ಹಿಂದೆಯಷ್ಟೇ 12 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಈ ಬ್ರಿಡ್ಜ್ ಸಂಪೂರ್ಣ ಜಖಂ ಕೊಚ್ಚಿ ಹೋಗಿದ್ದು, ಭಾರಿ ಅವಾಂತರ ಸೃಷ್ಟಿಯಾಗಿದೆ. 

ಸೇತುವೆ ಕಳಪೆ ಕಾಮಗಾರಿ ಹಿನ್ನೆಲೆ ಕೊಚ್ಚಿ ಹೋಗಿದೆ ಎನ್ನಲಾಗ್ತಿದೆ. ಸೇತುವೆ ಕೊಚ್ಚಿ ಹೋಗಿದ್ದರಿಂದ ಬೀಡಿ ಗ್ರಾಮದಿಂದ ಗೋಲಿಹಳ್ಳಿ ರೈತರ ಜಮೀನುಗಳಿಗೆ ನೀರು ನುಗ್ಗಿದ್ದಲ್ಲದೇ ಜಮೀನಿಗೆ ಇದ್ದ ಸಂಪರ್ಕ ಬಂದ್‌ ಆಗಿದೆ
ಇರ್ಪಾನ ತಾಳಿಕೋಟಿ , ಯುಥ್ ಕಾಂಗ್ರೆಸ್ ಅಧ್ಯಕ್ಷ ಖಾನಾಪುರ :

ಶಾಸಕರ ಅನುದಾನದಡಿಯಲ್ಲಿ ಈ ಕಾಮಗಾರಿ ನಡೆದಿದೆ ಕಾಮಗಾರಿಯ ಬಿಲ್ ತೆಗೆದು ತಿನ್ನುವ ನೆಪದಲ್ಲಿ ಈ‌ ಕಾಮಗಾರಿಯನ್ನು ಕಳಪೆ ಮಟ್ಟದಲ್ಲಿ ಮಾಡಲಾಗಿದೆ. ಕಾಮಗಾರಿಯ ಬಗ್ಗೆ ತಿಳುವಳಿಕೆ ಇಲ್ಲದ ವ್ಯಕ್ತಿಗೆ ಕೆಲಸ ನೀಡಿದ್ದ ಪರಿಣಾಮ ಹಾಗೂ ಕಳೆದೆರಡು ದಿನಗಳಿಂದ ‌ಸುರಿದ ಮಳೆಯಿಂದ ಈ‌ ಅವಘಡ ಸಂಭವಿಸಿದೆ.

Related posts: