RNI NO. KARKAN/2006/27779|Sunday, May 24, 2026
You are here: Home » breaking news » ಗೋಕಾಕ:ಸಿ ಪುಟ್ಟರಂಗಶೆಟ್ಟಿ ಅವರನ್ನುಸಂಪುಟದಿಂದ ಕೈ ಬಿಟ್ಟರೆ ರಾಜ್ಯದ್ಯಂತ ಉಗ್ರ ಹೋರಾಟ : ಭರಮಣ್ಣ ಉಪ್ಪಾರ

ಗೋಕಾಕ:ಸಿ ಪುಟ್ಟರಂಗಶೆಟ್ಟಿ ಅವರನ್ನುಸಂಪುಟದಿಂದ ಕೈ ಬಿಟ್ಟರೆ ರಾಜ್ಯದ್ಯಂತ ಉಗ್ರ ಹೋರಾಟ : ಭರಮಣ್ಣ ಉಪ್ಪಾರ 

ಸಿ ಪುಟ್ಟರಂಗಶೆಟ್ಟಿ ಅವರನ್ನುಸಂಪುಟದಿಂದ ಕೈ ಬಿಟ್ಟರೆ ರಾಜ್ಯದ್ಯಂತ ಉಗ್ರ ಹೋರಾಟ : ಭರಮಣ್ಣ ಉಪ್ಪಾರ

ಗೋಕಾಕ ಡಿ 20 : ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ ಪುಟ್ಟರಂಗಶೆಟ್ಟಿ ಅವರನ್ನು ಬರುವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸಂಪುಟದಿಂದ ಕೈ ಬಿಟ್ಟರೆ ರಾಜ್ಯದ ಉಪ್ಪಾರ ಸಮಾಜದಿಂದ ರಾಜ್ಯಾಧ್ಯಾಂತ ಉಗ್ರ ಹೋರಾಟ ಮಾಡಲಾಗುವದೆಂದು ಉಪ್ಪಾರ ಸಮಾಜದ ಯುವ ಘಟಕದ ರಾಜ್ಯಾಧ್ಯಕ್ಷ ಭರಮಣ್ಣ ಉಪ್ಪಾರ ತಿಳಿಸಿದ್ದಾರೆ.
ಅವರು, ಗುರುವಾರದಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದಿ.22 ರಂದು ನಡೆಯುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೇಸ್‍ನ ಕೆಲ ಸಚಿವರನ್ನು ಸಂಪುಟದಿಂದ ಕೈ ಬಿಡಲಾಗುತ್ತಿದ್ದು, ಹಿಂದುಳಿದ ವರ್ಗಗಳ ನಾಯಕರಾಗಿರುವ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ ಪುಟ್ಟರಂಗಶೆಟ್ಟಿ ಅವರನ್ನು ಸಂಪುಟದಿಂದ ಕೈ ಬಿಡಲಾಗುತ್ತದೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ ಪುಟ್ಟರಂಗಶೆಟ್ಟಿ ಅವರನ್ನು ಸಂಪುಟದಿಂದ ಕೈ ಬಿಟ್ಟರೆ ಹಿಂದುಳಿದ ವರ್ಗಕ್ಕೆ ಸೇರಿರುವ ಉಪ್ಪಾರ ಸಮುದಾಯಕ್ಕೆ ರಾಜ್ಯದ ಸಮ್ಮಿಶ್ರ ಸರಕಾರದಿಂದ ಅನ್ಯಾಯವಾಗುತ್ತದೆ. ಹೀಗಾಗಿ ಸಚಿವರನ್ನು ಸಂಪುಟದಿಂದ ಕೈ ಬಿಟ್ಟಿದ್ದೆಯಾದಲ್ಲಿ ರಾಜ್ಯಾಧ್ಯಂತ ಸಮಾಜ ಭಾಂದವರು ಉಗ್ರಹೋರಾಟ ಮಾಡಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Related posts: