RNI NO. KARKAN/2006/27779|Thursday, October 16, 2025
You are here: Home » breaking news » ಘಟಪ್ರಭಾ:ದಲಿತ ಮಹಿಳೆಯರು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲರಾಗುವ ಅವಶ್ಯಕತೆ ಇದೆ : ಗೀತಾ ಸಣ್ಣಕ್ಕಿ

ಘಟಪ್ರಭಾ:ದಲಿತ ಮಹಿಳೆಯರು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲರಾಗುವ ಅವಶ್ಯಕತೆ ಇದೆ : ಗೀತಾ ಸಣ್ಣಕ್ಕಿ 

ದಲಿತ ಮಹಿಳೆಯರು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲರಾಗುವ ಅವಶ್ಯಕತೆ ಇದೆ : ಗೀತಾ ಸಣ್ಣಕ್ಕಿ

ಘಟಪ್ರಭಾ ನ 24 : ದಲಿತ ಮಹಿಳೆಯರು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲರಾಗುವ ಅವಶ್ಯಕತೆ ಇದೆ ಎಂದು ಡಿ.ಎಸ್.ಎಸ್ ಮಹಿಳಾ ಘಟಕದ ಬೆಳಗಾವಿ ಜಿಲ್ಲಾ ಸಂಚಾಲಕಿ ಗೀತಾ ಸಣ್ಣಕ್ಕಿ ಹೇಳಿದರು.
ಅವರು ಶುಕ್ರವಾರ ಸಂಜೆ ಸಮೀಪದ ಕೊಣ್ಣೂರ ಪ್ರವಾಸಿ ಮಂದಿರದಲ್ಲಿ ಡಿ.ಎಸ್.ಎಸ್ ಜಿಲ್ಲಾ ಮಹಿಳಾ ಘಟಕವತಿಯಿಂದ ಹಮ್ಮಿಕೊಂಡ ಮಹಿಳೆಯರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತ, ದಲಿತ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಸರ್ಕಾರ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕಾಗಿದೆ. ಮಹಿಳೆಯರು ಕೇವಲ ಅಡುಗೆ ಕೋಣೆಗೆ ಸೀಮಿತವಲ್ಲ್ಲ. ಅವರಿಗೂ ಕೂಡಾ ಸ್ವತಂತ್ರವಾಗಿ ಬಾಳುವ ಅಧಿಕಾರವಿದೆ. ಯಾವುದೆ ಮಹಿಳೆಗೆ ಅನ್ಯಾಯವಾದಲ್ಲಿ, ನಾವು ಸಂಗಟಿತರಾಗಿ ಹೋರಾಡುವ ಮೂಲಕ ಆ ಮಹಿಳೆಗೆ ನ್ಯಾಯವನ್ನು ಕೊಡಿಸಬಹುದು ಎಂದರು.
ಈ ಸಂದರ್ಭದಲ್ಲಿ ಕು.ಜಯಶ್ರೀ ಸನದಿ ಅವರನ್ನು ಸಂಘಟನೆಯ ಮಹಿಳಾ ಘಟಕದ ತಾಲೂಕಾ ಸಂಚಾಲಕಿಯಾಗಿ ಹಾಗೂ ಶ್ರೀಮತಿ ರೂಪಾ ಗಸ್ತಿ ಅವರನ್ನು ಕೊಣ್ಣೂರ ಮಹಿಳಾ ಘಟಕದ ಸಂಚಾಲಕಿಯಾಗಿ ಆಯ್ಕೆ ಮಾಡಿ ಆದೇಶ ಪತ್ರ ನೀಡಲಾಯಿತು.
ಕರ್ನಾಟಕ ದಲತ ಸಂಘರ್ಷ ಸಮೀತಿ ಜಿಲ್ಲಾ ವಿಭಾಗಿಯ ಸಂಚಾಲಕಿ ಸುದಾ ಮುರಕುಂಬಿ, ತಾ.ಪಂ ಸದಸ್ಯೆ ಫರೀದಾ ಮುಲ್ಲಾ, ಕರ್ನಾಟಕ ಯುವ ಸೇನೆ ತಾಲೂಕಾ ಅಧ್ಯಕ್ಷ ಸಲೀಮ ಮುಲ್ಲಾ, ಜ್ಞಾನದೇವ ತೋಡಕರ, ಪ್ರಭಾಕರ ಪಾಟೀಲ, ರಿಯಾಜ ಮುಲ್ಲಾ ಸೇರಿದಂತೆ ಅನೇಕರು ಮಹಿಳೆಯರು ಇದ್ದರು.

Related posts: