ಗೋಕಾಕ:ಮನೆ ಮನೆಗೆ ತೆರಳಿ ಮತದಾರ ಸಮೀಕ್ಷೆ
ಮನೆ ಮನೆಗೆ ತೆರಳಿ ಮತದಾರ ಸಮೀಕ್ಷೆ
ಬೆಟಗೇರಿ ನ 10 : ಗ್ರಾಮದ ಭಾಗ ಸಂಖ್ಯೆ 280 ರ ಬಿಎಲ್‍ಒ ಬಿ.ಟಿ.ಪುಂಜಿ ಅವರು ಶನಿವಾರ ನ.10 ರಂದು ಸ್ಥಳೀಯ ಮನೆ ಮನೆಗೆ ತೆರಳಿ ಮತದಾರರ ಚೀಟಿ ಕುರಿತು ಸ್ಥಳೀಯರಲ್ಲಿ ತಿಳುವಳಿಕೆ ಮೂಡಿಸಿ ಸಮೀಕ್ಷೆ ನಡೆಸಿದರು.
ಗ್ರಾಮದಲ್ಲಿರುವ 18 ವರ್ಷ ವಯಸ್ಸು ಪೊರೈಸಿದವರು ತಪ್ಪದೇ ಮತದಾರ ಯಾದಿಯಲ್ಲಿ ತಮ್ಮ ಹೆಸರು ನೊಂದಣಿ ಮಾಡಿಕೊಳ್ಳಬೇಕು. 2018 ಡಿಸೆಂಬರ31ರೊಳಗೆ 18 ವರ್ಷ ಪೂರೈಸುವ ಗ್ರಾಮಸ್ಥರು ಸಹ ಮತದಾರರ ಯಾದಿಯಲ್ಲಿ ತಮ್ಮ ಹೆಸರು ನೊಂದಾಯಿಸಬೇಕು. ಇದೇ ನವ್ಹಂಬರ 20 ಕೊನೆಯ ದಿನವಾಗಿದ್ದು, ಈಗಾಗಲೇ ಮತದಾರ ಯಾದಿಯಲ್ಲಿ ದಾಖಲಾದ ತಮ್ಮ ಹೆಸರು ದೋಷಗಳ, ಮರಣ, ವರ್ಗಾವಣೆಗೊಂಡ ನೌಕರರು ಮತ್ತು ಮತ್ತಿತರರು ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬೇಕೆಂದು ಎಂದು ಬಿಎಲ್‍ಒ ಬಿ.ಟಿ.ಪುಂಜಿ ಸ್ಥಳೀಯರಿಗೆ ತಿಳಿಸಿದರು.
ಸ್ಥಳೀಯ ಯುವ ಧುರೀಣರಾದ ಈಶ್ವರ ಮುಧೋಳ, ಈರಣ್ನ ಕಂಬಾರ ಸೇರಿದಂತೆ ಸ್ಥಳೀಯ ಪ್ರಾಥಮಿಕ ಶಾಲೆಯ ಶಿಕ್ಷಕರು, ಮತ್ತೀತರರು ಇದ್ದರು.
Related posts:
ಘಟಪ್ರಭಾ:ಬಿಜೆಪಿ ಪಕ್ಷ ಉಪ್ಪಾರ ಸಮಾಜವನ್ನು ಕೇವಲ ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದೆ : ಮಲ್ಲಿಕಾರ್ಜುನ ಚೌಕಶಿ …
ಗೋಕಾಕ:ಇಂದು ಮಹಿಳೆ ಸಂಸಾರಕ್ಕೆ ಸೀಮಿತವಾಗದೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿ ದ್ದಾಳೆ : ಪ…
ಘಟಪ್ರಭಾ:ಶಾಸಕ ಸತೀಶ ಜಾರಕಿಹೊಳಿ ಪರವಾಗಿ ಘಟಪ್ರಭಾ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ್ದ ಪ್ರತಿಭಟನಾರಾರರ ಮೇಲೆ ಪ್ರಕರಣ ದ…