ಗೋಕಾಕ:ಸತ್ಕಾರ್ಯ ಹಾಗೂ ಸನ್ಮಾರ್ಗದಲ್ಲಿ ನಡೆಯುವರು ದೇವರು ಅನುಗ್ರಹಕ್ಕೆ ಪಾತ್ರರಾಗುತ್ತಾರೆ : ಶ್ರೀ ಪ್ರದೀಪ ಘಂಟಿ ಮಹಾರಾಜರು
ಸತ್ಕಾರ್ಯ ಹಾಗೂ ಸನ್ಮಾರ್ಗದಲ್ಲಿ ನಡೆಯುವರು ದೇವರು ಅನುಗ್ರಹಕ್ಕೆ ಪಾತ್ರರಾಗುತ್ತಾರೆ : ಶ್ರೀ ಪ್ರದೀಪ ಘಂಟಿ ಮಹಾರಾಜರು
ಗೋಕಾಕ ನ 3 : ಸದೃಢವಾದ ದೇಹದಲ್ಲಿ ಮನಸ್ಸು ಇರುತ್ತದೆ, ಭಕ್ತಿ ಶೃದ್ಧೆಯಿಂದ ಭಗವಂತನ ಜ್ಞಾನ ಮಾಡುವಂತೆ ಇಂಚಗೇರಿ ಮಠದ ಶ್ರೀ ಪ್ರದೀಪ ಘಂಟಿ ಮಹಾರಾಜರು ಹೇಳಿದರು.
ಇಲ್ಲಿಯ ಆದಿತ್ಯ ನಗರದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಒಂದು ವಾರ ಕಾಲ ನಡೆದ ಜ್ಞಾನಯಜ್ಞ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಸತ್ಕಾರ್ಯ ಹಾಗೂ ಸನ್ಮಾರ್ಗದಲ್ಲಿ ನಡೆಯುವರು ದೇವರು ಅನುಗ್ರಹಕ್ಕೆ ಪಾತ್ರರಾಗುತ್ತಾರೆ, ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ನೆಮ್ಮದಿಯೊಂದಿಗೆ ಪರಸ್ಪರರಲ್ಲಿ ವಿಶ್ವಾಸ ಹೆಚ್ಚಾಗುವುದು. ಇಂತಹ ಪುಣ್ಯ ಕಾರ್ಯಗಳಲ್ಲಿ ಪಾಲ್ಗೊಂಡು ಪುಣ್ಯವಂತರಾಗಿರೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಸದ್ಭಕ್ತರು ಘಂಟಿ ಮಹಾರಾಜರನ್ನು ಸತ್ಕರಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ವಿಠ್ಠಲ ಮಹಾರಾಜರು, ಶ್ರೀ ಶ್ರೀಮಂತ ಶರಣರು, ಜಿ.ಪಂ.ಸದಸ್ಯ ಮಡ್ಡೆಪ್ಪ ತೋಳಿನವರ, ಎಪಿಎಮ್‍ಸಿ ಅಧ್ಯಕ್ಷ ಅಡಿವೆಪ ಕಿತ್ತೂರ ,
ನ್ಯಾಯವಾದಿ ಎಮ್.ವಾಯ್.ಹಾರುಗೇರಿ, ವಿ.ಟಿ.ಕಮತ, ಕೆಂಚಪ್ಪ ಗೌಡಪ್ಪಗೋಳ, ಲಕ್ಷ್ಮೀಕಾಂತ ಯತ್ತಿನಮನಿ, ಎಲ್.ಎಲ್.ಓಜಪ್ಪಗೋಳ, ಯಲ್ಲಪ್ಪ ಪೂಜೇರಿ, ಆರ್.ಬಿ.ಮಾವಿನಗಿಡದ, ಆರ್.ಎಮ್.ವಾಲಿ, ಡಿ.ಡಿ.ತಳವಾರ, ಸಿ.ಎಸ್.ಮೆಣಸಿನಕಾಯಿ, ಸಂಜು ಕದಂ ಸೇರಿದಂತೆ ಅನೇಕರು ಇದ್ದರು.