RNI NO. KARKAN/2006/27779|Monday, February 2, 2026
You are here: Home » breaking news » ಗೋಕಾಕ:ಗ್ರಾಮದ ಅಭಿವೃದ್ಧಿಗೆ ಸರ್ವರ ಸಹಕಾರ ಅತ್ಯಂತ ಅಗತ್ಯವಾಗಿದೆ : ಲಕ್ಷ್ಮಣ ಚಂದರಗಿ

ಗೋಕಾಕ:ಗ್ರಾಮದ ಅಭಿವೃದ್ಧಿಗೆ ಸರ್ವರ ಸಹಕಾರ ಅತ್ಯಂತ ಅಗತ್ಯವಾಗಿದೆ : ಲಕ್ಷ್ಮಣ ಚಂದರಗಿ 

ಗ್ರಾಮದ ಅಭಿವೃದ್ಧಿಗೆ ಸರ್ವರ ಸಹಕಾರ ಅತ್ಯಂತ ಅಗತ್ಯವಾಗಿದೆ : ಲಕ್ಷ್ಮಣ ಚಂದರಗಿ

ಗೋಕಾಕ ಅ 27 : ಬೆಟಗೇರಿ ಗ್ರಾಮದ ಸಮಗ್ರ ಅಭಿವೃದ್ದಿಗೆ ಸ್ಥಳೀಯರ ಹಾಗೂ ಗ್ರಾಮ ಪಂಚಾಯ್ತಿ ಸರ್ವ ಸದಸ್ಯರ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದು ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ಹೇಳಿದರು.
ಅವರು, ತಾಲೂಕಿನ ಬೆಟಗೇರಿ ಗ್ರಾಮದ ಲಕ್ಷ್ಮೀ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಬುಧವಾರ ಅ.24 ರಂದು ನಡೆದ ಶಾಲೆಯ ಆವರಣ ಭದ್ರತಾ ಗೋಡೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸ್ಥಳೀಯ ಗ್ರಾಪಂ ಕಾರ್ಯದರ್ಶಿ ಗೌಡಪ್ಪ ಮಾಳೇದ ಮಾತನಾಡಿ, ಇಲ್ಲಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದ ರಕ್ಷಣಾ ಗೋಡೆಯನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ 4.50 ಲಕ್ಷ ರೂ.ಗಳ ಅನುದಾನದಡಿಯಲ್ಲಿ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಗ್ರಾಪಂ ಕಾಕ್ರ್ಲ ಸುರೇಶ ಬಾಣಸಿ, ಗ್ರಾಪಂ ಸದಸ್ಯ ಅಜ್ಜಪ್ಪ ಪೇದಣ್ಣವರ, ಶಿವಪ್ಪ ದೇಯಣ್ಣವರ, ಉದ್ದಪ್ಪ ಆಶೆಪ್ಪಗೋಳ, ಶಾಲೆಯ ಎಸ್‍ಡಿಎಮ್‍ಸಿ ಅಧ್ಯಕ್ಷ ಮಾರುತಿ ಚಂದರಗಿ, ಬಸಪ್ಪ ಮುರಗೋಡ, ಮುಖ್ಯ ಶಿಕ್ಷಕ ಹಂಜಿ, ಶಿಕ್ಷಕ ಎಸ್.ಕೆ.ಕಾಂಬಳೆ ಸೇರಿದಂತೆ ಎಸ್‍ಡಿಎಮ್‍ಸಿ ಸದಸ್ಯರು, ಗ್ರಾಪಂ ಸದಸ್ಯರು, ಲಕ್ಷ್ಮೀ ನಗರದ ಸ್ಥಳೀಯರು, ಇತರರು ಇದ್ದರು.

Related posts: