ಗೋಕಾಕ:ರಾಮಾಯಣದಂತಹ ಮಹಾಕಾವ್ಯ ಜಗತ್ತಿನಲ್ಲಿ ಮತ್ತೊಂದಿಲ್ಲ
ರಾಮಾಯಣದಂತಹ ಮಹಾಕಾವ್ಯ ಜಗತ್ತಿನಲ್ಲಿ ಮತ್ತೊಂದಿಲ್ಲ
*ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಚಂದ್ರು ಹಾಲೊಳ್ಳಿ ಅಭಿಮತ
*ವಾಲ್ಮೀಕಿ ಭಾವ ಚಿತ್ರಕ್ಕೆ ಪೊಜೆ, ಪುಷ್ಪಾರ್ಪನೆ * ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ
ಬೆಟಗೇರಿ ಅ 24 : ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯದಲ್ಲಿ ಕಟ್ಟಿದ ಒಂದರೊಳಗೊಂದು ಘಟನೆಗಳನ್ನು ಹೆಣೆಯುತ್ತಾ ಹೊಗುವ ಶೈಲಿ, ರಸ ಪೂರಕವಾಗಿದ ಶ್ಲೋಕಗಳು ಇದರಲ್ಲಿ ಪಾತ್ರಗಳನ್ನು ಅಚ್ಚುಕಟ್ಟಾಗಿ ರೂಪಿಸಿದ ಪರಿ ಇಂದಿಗೂ ಯಾರಿಗೂ ಸಿದ್ಧಿಸಿಲ್ಲ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಚೈತನ್ಯ ಗ್ರುಪ್ಸ್‍ನ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಉಭಯ ಶಾಲೆಗಳ ಆಡಳಿತಾಧಿಕಾರಿ ಚಂದ್ರು ಹಾಲೊಳ್ಳಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಚೈತನ್ಯ ಗ್ರುಪ್ಸ್‍ನ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಉಭಯ ಶಾಲೆಗಳಲ್ಲಿ ಬುಧವಾರ ಅ.24ರಂದು ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಮಾಯಣದಂತಹ ಮಹಾಕಾವ್ಯ ಜಗತ್ತಿನಲ್ಲಿ ಮತ್ತೊಂದಿಲ್ಲ, ಭಾರತ ದೇಶದಲ್ಲಿ ಸೃಷ್ಟಿಗೊಂಡು ವಿಶ್ವ ಮಾನ್ಯವಾಗಿದೆ ಎಂದರು.
ಮಹರ್ಷಿ ವಾಲ್ಮೀಕಿ ಭಾವ ಚಿತ್ರಕ್ಕೆ ಪೋಜೆ, ಪುಷ್ಪಾರ್ಪನೆ ಸಲ್ಲಿಸಿದ ಬಳಿಕ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು. ಶಾಲೆಯ ವಿದ್ಯಾರ್ಥಿಗಳಿಂದ ವಾಲ್ಮೀಕಿ ಕುರಿತು ಭಾಷಣ, ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು, ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಉಭಯ ಶಾಲೆಗಳ ಮುಖ್ಯ ಶಿಕ್ಷಕರಾದ ದೇವಕಿ ಗೌಡ, ಸಂಜೀವ ಮೆಳವಂಕಿ, ಶಿಕ್ಷಕರು, ಸಿಬ್ಬಂದಿ ವರ್ಗ, ಶಿಕ್ಷಣ ಪ್ರೇಮಿಗಳು, ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು. ಸಿದ್ದಪ್ಪ ಹಕ್ಕಿ ಸ್ವಾಗತಿಸಿದರು. ನಬೀಸಾಬ ನದಾಫ್ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ವರಿ ಚೌಗಲಾ ಕೊನೆಗೆ ವಂದಿಸಿದರು.