ಗೋಕಾಕ:ಸಚಿವ ರಮೇಶ ಜಾರಕಿಹೊಳಿಗೆ ಧಾರವಾಡದ ಸರ್ವಧರ್ಮ ಸಮನ್ವಯ ಪೀಠದ ಶ್ರೀ ಸಂಗಮಾನಂದ ಸ್ವಾಮೀಜಿಯಿಂದ ಸನ್ಮಾನ
ಸಚಿವ ರಮೇಶ ಜಾರಕಿಹೊಳಿಗೆ ಧಾರವಾಡದ ಸರ್ವಧರ್ಮ ಸಮನ್ವಯ ಪೀಠದ ಶ್ರೀ ಸಂಗಮಾನಂದ ಸ್ವಾಮೀಜಿಯಿಂದ ಸನ್ಮಾನ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 2 :
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರ ಮಹಾದಾಯಿ ಅಧಿಸೂಚನೆ ಹೊರಡಿಸಿದ ಹಿನ್ನಲೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರನ್ನು ಧಾರವಾಡದ ಸರ್ವಧರ್ಮ ಸಮನ್ವಯ ಪೀಠದ ಶ್ರೀ ಸಂಗಮಾನಂದ ಸ್ವಾಮೀಜಿಯವರು ಸನ್ಮಾನಿಸಿದರು.
ಶನಿವಾರದಂದು ತಾಲೂಕಿನ ಕೊಳವಿ ಗ್ರಾಮದ ಚನ್ನಮ್ಮ ವೃತ್ತದಲ್ಲಿ ರೈತರ ಸಂಕೇತವಾದ ಹಸಿರು ಶಾಲು ಹೋದಿಸುವ ಮೂಲಕ ಸಚಿವರನ್ನು ಸನ್ಮಾನಿಸಿ ಮಹಾದಾಯಿ ಯೋಜನೆ ಕಾಮಗಾರಿ ಅತಿಶೀಘ್ರದಲ್ಲೆ ಪ್ರಾರಂಭವಾಗಲಿ ಎಂದು ಶ್ರೀಗಳು ಹಾರೈಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿನವರ, ಈಶ್ವರ ಭಾಗೋಜಿ, ಅಶೋಕ ಗೋಣಿ ಸೇರಿದಂತೆ ಅನೇಕರು ಇದ್ದರು.