ಗೋಕಾಕ:ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಆಯ್ಕೆ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಆಯ್ಕೆ
ಗೋಕಾಕ ಅ 24 : ಕಲ್ಲೋಳಿಯ ಸ್ಥಳೀಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ವಿಶ್ವವಿದ್ಯಾಲಯಕ್ಕೆ ಆಯ್ಕೆಯಾಗಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಕು. ರಮೇಶ ಮಳವಾಡ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪುರುಷರ ಖೋ ಖೋ ತಂಡಕ್ಕೆ ಆಯ್ಕೆಯಾಗಿ ನ.25 ರಿಂದ ಆಂದ್ರಪ್ರದೇಶದ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ, ತಿರುಪತಿಯಲ್ಲಿ ನಡೆಯುವ ಅಂತರ ವಿ.ವಿ. ಖೋಖೋ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. ಕು. ಮಹೇಂದ್ರ ವಗ್ಗನವರ ಪುರುಷರ ಚೆಸ್ ತಂಡಕ್ಕೆ ಆಯ್ಕೆಯಾಗಿ ಡಿ. 16ರಿಂದ ಮಣಿಪಾಲ್ ವಿಶ್ವವಿದ್ಯಾಲಯದಲ್ಲಿ ಜರುಗುವ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.

ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಸಗೌಡ ಪಾಟೀಲ, ಉಪಾಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯ ಡಾ. ಸುರೇಶ ಹನಗಂಡಿ, ದೈಹಿಕ ನಿರ್ದೇಶಕ ಬಿ.ಕೆ.ಸೊಂಟನವರ, ಕ್ರೀಡಾಧಿಕಾರಿ ಬಿ.ಬಿ.ವಾಲಿ, ಅಧ್ಯಾಪಕ ವೃಂದದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
