ರಾಮದುರ್ಗ:ಜೈಲು ಕಿಟಕಿ ಮುರಿದು ಇಬ್ಬರು ಖೈದಿಗಳು ಫರಾರಿ : ರಾಮದುರ್ಗದಲ್ಲಿ ಘಟನೆ
ಜೈಲು ಕಿಟಕಿ ಮುರಿದು ಇಬ್ಬರು ಖೈದಿಗಳು ಫರಾರಿ : ರಾಮದುರ್ಗದಲ್ಲಿ ಘಟನೆ
ರಾಮದುರ್ಗ ಜೂ 21: ಸಬ್ ಜೈಲು ಕಿಟಕಿ ಮುರಿದು ಇಬ್ಬರು ವಿಚಾರಣಾಧೀನ ಖೈದಿಗಳು ಪರಾರಿಯಾದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ನಡೆದಿದೆ
ಬೈಕ್ ಕಳ್ಳತನ ಆರೋಪದಡಿ ಸಬ್ ಜೈಲನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಸುರೇಶ ಶರಣಪ್ಪ ಚಲವಾದಿ(36) ಹಾಗೂ ಮನೆ ಕಳ್ಳತನದಲ್ಲಿ ಬಂಧಿತನಾಗಿದ್ದ ವಿಜಾಪುರ ಜಿಲ್ಲೆ ಹೊನ್ನಳ್ಳಿ ಮೂಲದ ಸಂತೋಷ ಶಿವಣ್ಣ ನಂದಿಹಾಳ್ (36) ಪರಾರಿಯಾದ ಕೈದಿಗಳು.
ಕಳೆದ ಮೂರು ತಿಂಗಳಿಂದ ಜೈಲ್‌ನಲ್ಲಿದ್ದ ಕೈದಿಗಳು ಪರಾರಿಯಾಗಿದ್ದು, ಕೈದಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.