ಗೋಕಾಕ:ಮೂಲಭೂತ ಸೌಕರ್ಯಕ್ಕಾಗಿ ಹೆಚ್ಚಿನ ಆದ್ಯತೆ ನೀಡಲಾಗಿದೆ : ಶಿವಾನಂದ ಭಜಂತ್ರಿ
ಮೂಲಭೂತ ಸೌಕರ್ಯಕ್ಕಾಗಿ ಹೆಚ್ಚಿನ ಆದ್ಯತೆ ನೀಡಲಾಗಿದೆ : ಶಿವಾನಂದ ಭಜಂತ್ರಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 27 :
ಕೊಣ್ಣೂರು ಪುರಸಭೆಯ ಸರ್ವಾಂಗಿಣ ಅಭಿವೃದ್ಧಿಗೊಳಿಸಲು ಮತ್ತು ಮೂಲಭೂತ ಸೌಕರ್ಯಕ್ಕಾಗಿ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.
ಗುರುವಾರ ಸಮೀಪದ ಕೊಣ್ಣೂರು ಪುರಸಭೆಯ ಸನ್ 2020-21ನೇ ಸಾಲಿನ ಬಜೆಟ್ ಮಂಡನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಯವ್ಯಯದಲ್ಲಿ ಎಸ್‍ಎಫ್‍ಸಿ ಮತ್ತು ಸ್ಥಳೀಯ ನಿಧಿಯಡಿ ಶೇ 24.10 ರಡಿ (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ) ರೂ.43.54 ಲಕ್ಷ ಕಾಯ್ದಿರಿಸಿದ್ದು, ಶೇ. 7.25 ರಡಿ (ಇತರೆ ಹಿಂದೂಳಿದ ವರ್ಗಗಳ ಬಡತನ ನಿರ್ಮೂಲನೆ) ಕಾರ್ಯಕ್ರಮಕ್ಕಾಗಿ ರೂ.13.09 ಲಕ್ಷ ಹಾಗೂ ಶೇ,5 ರಡಿ ಅಂಗವಿಕಲರ ಕಲ್ಯಾಣ ಕಾರ್ಯಕ್ರಮಕ್ಕಾಗಿ ರೂ.9.03 ಲಕ್ಷಗಳ ಅನುದಾನವನ್ನು ಕಾಯ್ದಿರಿಸಿ ಕೊಣ್ಣೂರ ಪುರಸಭೆಯ ವ್ಯಾಪ್ತಿಯಯಲ್ಲಿ ಅಭಿವೃದ್ಧಿ ಕಾರ್ಯಗಳಾದ ರಸ್ತೆ,ಚರಂಡಿಗೆ ರೂ,114.00 ಲಕ್ಷ, ನೀರು ಸರಬರಾಜು ನಿರ್ವಹಣೆಗೆ ರೂ,91.60, ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಹಾಗೂ ನಿರ್ವಹಣೆ ಸಲುವಾಗಿ ರೂ,47.70 ಲಕ್ಷ ಘನತ್ಯಾಜ್ಯ ವಸ್ತು ನಿರ್ವಹಣೆಗೆ ರೂ,36.20 ಲಕ್ಷ ಬೀದಿ ದೀಪದ ನಿರ್ವಹಣೆಗೆ ರೂ,33.91 ಲಕ್ಷ,ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಾಲಯಕ್ಕಾಗಿ ರೂ,10.00 ಲಕ್ಷಗಳನ್ನು ಕಾಯ್ದಿರಿಸಿ, ಕೊಣ್ಣೂರ ಪುರಸಭೆಯ ಸನ್ 2020-21 ನೇ ಸಾಲಿನ ಅಂದಾಜು ಆಯ-ವ್ಯಯ ಪತ್ರಿಕಗೆಗೆ ಮಂಜೂರಾತಿ ನೀಡಲಾಗಿದೆ ಎಂದು ತಿಳಿಸಿದರು.
ಕೊಣ್ಣೂರು ಪುರಸಭೆಯ ಮುಖ್ಯಾಧಿಕಾರಿ ಎಸ್.ಎಮ್. ಹಿರೇಮಠರವರ ಸಮ್ಮುಖದಲ್ಲಿ ಸನ್ 2020-21 ನೇ ಸಾಲಿನ ರೂ.1.75 ಲಕ್ಷಗಳ ಉಳಿತಾಯದ ಕರಡು ಆಯವ್ಯಯವನ್ನು ಓದಲಾಯಿತು. ಪುರಸಭೆಯ ಲೇಖಪಾಲಕ ಬಿ.ಎಸ್.ದೊಡ್ಡಗೌಡರ ಇವರು ಒಟ್ಟು ರೂ.22,23,35,291 ಆಯ ಮತ್ತು ರೂ.22,21,59,791 ಕೋಟಿ ವ್ಯಯವುಳ್ಳ ಒಟ್ಟು ರೂ.1,75,500-00 ಲಕ್ಷಗಳ ಉಳಿತಾಯದ ಅಂದಾಜು ಪತ್ರಿಕೆಯನ್ನು ಮಂಡಿಸಿದರು. ಅದರಂತೆ ಸನ್ 2020-21 ನೇ ಸಾಲಿನ ಆಯವ್ಯಯಕ್ಕೆ ಆಡಳಿತಾಧಿಕಾರಿಗಳು ಮಂಜೂರಿ ನೀಡಿದರು