ಗೋಕಾಕ:ವೈಭವ ದೇವರಮನಿ ಮೂರನೇ ಬಾರಿ ಯುನಿರ್ವಸಿಟಿ ಬ್ಲೂ
ವೈಭವ ದೇವರಮನಿ ಮೂರನೇ ಬಾರಿ ಯುನಿರ್ವಸಿಟಿ ಬ್ಲೂ
ಗೋಕಾಕ ಸೆ 28 : ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಂತರ್ ಮಹಾವಿದ್ಯಾಲಯಗಳ ಚೆಸ್ ಪಂದ್ಯಾವಳಿಯಲ್ಲಿ ನಗರದ ಜೆಎಸ್‍ಎಸ್ ಕಾಲೇಜದ ವಿದ್ಯಾರ್ಥಿ ವೈಭವ ದೇವರಮನಿ ಪ್ರಥಮ ಸ್ಥಾನ ಪಡೆಯುವ ಮೂಲಕ ಮೂರನೇ ಬಾರಿ ಯುನಿರ್ವಸಿಟಿ ಬ್ಲೂ ಆಗುವ ಮೂಲಕ ಸಾಧನೆ ಮಾಡಿದ್ದಾನೆ.
ಜೆಎಸ್‍ಎಸ್ ಕಾಲೇಜದ ವಾಣಿಜ್ಯ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಯಾದ ವೈಭವ ದೇವರಮನಿ ಸತತ ಮೂರು ಬಾರಿ ವಿಶ್ವ ವಿದ್ಯಾಲಯಕ್ಕೆ ಪ್ರಥಮ ಸ್ಥಾನ ಗಳಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾನೆ.
ಈ ವಿದ್ಯಾರ್ಥಿಗೆ ಸುಧೀರ ಮಾಲದಿನ್ನಿ (ಗೋಕಾಕ) ಹಾಗೂ ಮನೋಜ (ನಿಪ್ಪಾಣಿ) ತರಬೇತಿ ನೀಡಿದ್ದಾರೆ.
ವಿದ್ಯಾರ್ಥಿಯ ಈ ಸಾಧನೆಯನ್ನು ಕಾಲೇಜದ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಶಿಕ್ಷಕ ವೃಂದ ಶ್ಲಾಘಿಸಿ ಅಭಿನಂದಿಸಿದ್ದಾರೆ.