RNI NO. KARKAN/2006/27779|Friday, August 1, 2025
You are here: Home » breaking news » ಘಟಪ್ರಭಾ:ಮಾತೆ ಮಹಾದೇವಿಯವರ ಮಾತು ಅತಿರೇಕದಾಗಿದೆ , ಕೂಡಲೇ ಕ್ಷಮೆಯಾಚಿಸಬೇಕು : ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಆಗ್ರಹ

ಘಟಪ್ರಭಾ:ಮಾತೆ ಮಹಾದೇವಿಯವರ ಮಾತು ಅತಿರೇಕದಾಗಿದೆ , ಕೂಡಲೇ ಕ್ಷಮೆಯಾಚಿಸಬೇಕು : ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಆಗ್ರಹ 

ಮಾತೆ ಮಹಾದೇವಿಯವರ ಮಾತು ಅತಿರೇಕದಾಗಿದೆ , ಕೂಡಲೇ ಕ್ಷಮೆಯಾಚಿಸಬೇಕು : ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಆಗ್ರಹ

ಘಟಪ್ರಭಾ ಅ 7: ಚಿತ್ರದುರ್ಗದ ಮುರುಘಾಮಠದ ಪೀಠ ಸಿಗದಿರುವ ಕಾರಣಕ್ಕೆ ಹಾನಗಲ್ಲ ಕುಮಾರ ಶಿವಯೋಗಿಗಳು ವೀರಶೈವ ಮಹಾಸಭಾ ಸ್ಥಾಪಿಸಿದರು ಹಾಗೂ ಈಗ ನಡೆಯುತ್ತಿರುವ ವೀರಶೈವ-ಲಿಂಗಾಯತ ಗೊಂದಲಕ್ಕೆ ಅವರೇ ಕಾರಣ ಎನ್ನುವ ಮಾತೆ ಮಹಾದೇವಿ ಹೇಳಿಕೆ ಈ ಬಾರಿ ಆಕ್ರೋಶಕ್ಕೆ ವ್ಯಕ್ತವಾಗಿದ್ದು ಈ ಬಗ್ಗೆ ಮಾತೆ ಮಹಾದೇವಿಯವರ ಮಾತು ಅತಿರೇಕದಾಗಿದ್ದು ಅವರು ಕೂಡಲೇ ಸಮಾಜದಲ್ಲಿ ಕ್ಷಮೆಯಾಚಿಸಬೇಕೆಂದು ಹಾನಗಲ್ಲ ಕುಮಾರ ಶಿವಯೋಗಿಗಳ ಜಯಂತಿ ಸಮಿತಿಯ ರಾಜ್ಯ ಅಧ್ಯಕ್ಷರು ಹಾಗೂ ಮೂರುಸಾವಿರ ಶಾಖಾ ಮಠವಾದ ಗುಬ್ಬಲಗುಡ್ಡದ ಕೆಂಪಯ್ಯ ಸ್ವಾಮಿ ಮಠದ ಪೀಠಾಧಿಕಾರಿಗಳಾದ ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಆಗ್ರಹಿಸಿದ್ದಾರೆ.

ಅವರು ಶನಿವಾರದಂದು ಘಟಪ್ರಭಾದಲ್ಲಿ ಸುದ್ದಿಗೋಷ್ಠಿ ನಡೆಸಿ ಕಠಿಣ ಶಬ್ದಗಳಲ್ಲಿ ಖಂಡಿಸಿ ಮಾತೆ ಮಹಾದೇವಿಯವರು ಕೀಳು ಪ್ರಚಾರಕ್ಕಾಗಿ ನೀಡಿದ ಹೇಳಿಕೆ ಸಂಪೂರ್ಣವಾಗಿ ಅಸತ್ಯದಿಂದ ಕೂಡಿದೆ. ಚಿತ್ರದುರ್ಗದ ಮುರಘಾಮಠದ ಜಯದೇವ ಜಗದ್ಗುರುಗಳೇ 1931ರಲ್ಲಿ ಶಿವಯೋಗ ಮಂದಿರ ಸಂಸ್ಥೆಯಿಂದ ಪ್ರಕಟಗೊಂಡ ಸ್ಮಾರಕ ಚಂದ್ರಿಕೆ ಎಂಬ ಗ್ರಂಥಕ್ಕೆ ತಮ್ಮ ಸಂದೇಶವನ್ನು ಬರೆದುಕೊಟ್ಟು ನನ್ನನ್ನು ಮುರಘಾಮಠದ ಪೀಠಕ್ಕೆ ಬರಮಾಡಿಕೊಂಡವರೇ ಹಾನಗಲ್ಲ ಕುಮಾರೇಶ್ವರರು ಹಾಗೂ ನನಗೂ ಮತ್ತು ನನ್ನಂತಹ ಹಲವಾರು ಸಾಧಕರಿಗೆ ವಿಧ್ಯಾಭ್ಯಾಸಕ್ಕಾಗಿ ಸಹಾಯ ಮಾಡಿದವರು ಅವರು ಅಸಮರ್ಥರನ್ನು ಸಮರ್ಥರನ್ನಾಗಿ ಮಾಡಿಸುವಂತಹ ದಕ್ಷರಾಗಿದ್ದರು ಎಂದು ತಮ್ಮ ಸಂದೇಶದಲ್ಲಿ ಬರೆದಿರುವುದು ಟೀಕಿಸುವವರ ಮುಖ ನೋಡಿಕೊಳ್ಳುವ ಕನ್ನಡಿಯಾಗಿದೆÉ ಎಂದು ಹೇಳಿ 1931ರಲ್ಲಿ ಮುರಘಾಮಠದ ನೀಡಿದ ಸಂದೇಶವನ್ನು ಬಿಡುಗಡೆ ಮಾಡಿದರು. ಹಾಗೂ ಇಂತಹ ಐತಿಹಾಸಿಕ ಸತ್ಯ ಮರೆಮಾಚಿ ಅತಿರೇಕದ ಹೇಳಿಕೆ ನೀಡಿ ಮಹಾಸ್ವಾಮಿಗಳ ಘನತೆಗೆ ಧಕ್ಕೆ ತರುತ್ತಿರುವುದು ಖಂಡನೀಯವಾಗಿದೆ. ಹಾನಗಲ್ಲ ಕುಮಾರ ಶಿವಯೋಗಿಗಳು ಸಮಾಜ ಸಂಘಟನೆ, ಸ್ವಾಭಿಮಾನ, ಹಾಗೂ ಶಿಕ್ಷಣಕ್ಕಾಗಿ ಅಖಿಲಭಾರತ ವೀರಶೈವ ಮಹಾಸಭಾವನ್ನು ಸ್ಥಾಪಿಸಿ ನಾಡಿಗೆ ಬೆಳಕನ್ನು ಚೆಲ್ಲಿದವರು. ಮಠಾಧಿಪತಿಗಳಾದವರಿಗೆ ಸಂಸ್ಕಾರಯುತ ಶಿಕ್ಷಣ-ನೀತಿ-ಅಚಾರ-ವಿಚಾರ-ಧರ್ಮ ಹಾಗೂ ಶಿಕ್ಷಣಕ್ಕಾಗಿ ಶಿವಯೋಗ ಮಂದಿರವನ್ನು ಸ್ಥಾಪಿಸಿ ಖಾವಿಕುಲತಿಲಕರಾಗಿ ಕಲುಷಿತ ಸಮಾಜವನ್ನು ಶುದ್ಧಗೊಳಿಸಿದವರು ಹಾಗೂ ಆರ್ಯವೇಧ, ಸಂಗೀತ, ಸಾಹಿತ್ಯ, ಗೋ ರಕ್ಷಣೆ, ವಚನ ಸಾಹಿತ್ಯ, ಶುದ್ಧ ವಿಭೂತಿ ಕೇಂದ್ರ ಹಾಗೂ ದೇಶಿ ಕೃಷಿ ಪದ್ಧತಿಗಳನ್ನು ನಾಡಿಗೆ ಮಾರ್ಗದರ್ಶನ ಮಾಡಿ ವೀರಶೈವ ಲಿಂಗಾಯಿತರು ಸ್ವಾಭಿಮಾನದಿಂದ ಬದುಕಲು ಪ್ರೇರಿಪಿಸಿದವರಾಗಿದ್ದಾರೆ. ಇಂತಹವರ ಬಗ್ಗೆ ಚಾರಿತ್ರ್ಯಹೀನರಾದ ಮಾತೆ ಮಹಾದೇವಿಗೆ ಮಾತನಾಡಲು ಯಾವ ನೈತಿಕತೆಯೂ ಇಲ್ಲ ಅವರಿಗೆ ಯಾವ ಸಂಸ್ಕಾರ, ಹಿನ್ನಲೆ ಇಲ್ಲ. ಕೀಳು ಪ್ರಚಾರಕ್ಕಾಗಿ ಹೇಳಿಕೆ ನೀಡಿ ಹಲವಾರು ಬಾರಿ ಅವಮಾನಿತರಾಗಿ ನ್ಯಾಯಾಲಯದಿಂದಲೂ ಚೀಮಾರಿಗೆ ಒಳಗಾಗಿದ್ದಾರೆ. ಅವರು ತಮ್ಮ ಹಿನ್ನಲೆಯನ್ನು ತಾವೆ ವಿಮರ್ಶೆ ಮಾಡಿಕೊಂಡರೆ ಅವರ ಘನತೆಯ ಬಗ್ಗೆ ಅವರಿಗೆ ಅರ್ಥವಾಗುತ್ತದೆ. ಆದ್ದರಿಂದ ಕೂಡಲೇ ಇವರು ಹಾನಗಲ್ಲ ಕುಮಾರ ಶಿವಯೋಗಿಗಳ ಬಗ್ಗೆ ನೀಡಿದ ಹೇಳಿಕೆಯನ್ನು ಹಿಂದಕ್ಕೆ ಪಡೆದು ಕ್ಷಮೆಯಾಚಿಸದಿದ್ದರೆ ಹಾನಗಲ್ಲ ಕುಮಾರೇಶ್ವರ ಜಯಂತಿಯ ರಾಜ್ಯ ಸಮಿತಿಯಿಂದ ಹಾಗೂ ಎಲ್ಲಾ ಹಿರಿಯ ಸ್ವಾಮಿಜಿಗಳು ಸೇರಿ ರಾಜ್ಯವ್ಯಾಪ್ತಿ ಪ್ರತಿಭಟನೆಯನ್ನು ನಡೆಸುತ್ತೇವೆ. ಈ ಸಂದರ್ಭದಲ್ಲಿ ಆಗುವ ಎಲ್ಲಾ ಅವಘಡಕ್ಕೆ ಮಾತೆ ಮಹಾದೇವಿಯವರೇ ಕಾರಣರಾಗುತ್ತಾರೆಂದು ನೇರ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಮಹಾಸ್ವಾಮೀಜಿಗಳ ಜೊತೆಗೆ ಕುಮಾರೇಶ್ವರ ಜಯಂತಿ ಸಮಿತಿಯ ಕಾರ್ಯದರ್ಶಿಗಳಾಗಿರುವ ಹಾವೇರಿಯ ಸದಾಶಿವ ಮಹಾಸ್ವಾಮಿಗಳು, ಹುಕ್ಕೇರಿಯ ವಿರಕ್ತ ಮಠದ ಶಿವಬಸವ ಮಹಾಸ್ವಾಮಿಗಳು ಹಾಗೂ ಹಲವಾರು ಸಾಧಕರು ಇದ್ದರು.

Related posts: