RNI NO. KARKAN/2006/27779|Sunday, February 15, 2026
You are here: Home » breaking news » ಘಟಪ್ರಭಾ:ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಚುನಾವಣೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ

ಘಟಪ್ರಭಾ:ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಚುನಾವಣೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ 

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಚುನಾವಣೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ

ಘಟಪ್ರಭಾ .ಸೆ 19 : ಸಮೀಪದ ಶಿಂದಿಕುರಬೇಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ., ಶಿಂದಿಕುರಬೇಟ ಇದರ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆಯು ಅವಿರೋಧ ಆಯ್ಕೆ ಇತ್ತಿಚಿಗೆ ಸಂಘದ ಕಾರ್ಯಾಲಯದಲ್ಲಿ ಜರುಗಿತು.
ಅಧ್ಯಕ್ಷರಾಗಿ ಮಂಜುನಾಥ ಬಾಬು ಗುಡಕೇತ್ರ, ಉಪಾಧ್ಯಕ್ಷರಾಗಿ ಬಡಪ್ಪ ಲಕ್ಷ್ಮಣ ಬಂಡಿವಡ್ಡರ ಅವಿರೋಧವಾಗಿ ಆಯ್ಕೆಗೊಂಡರು ಎಂದು ಚುನಾವಣಾಧಿಕಾರಿಗಳಾದ ಎಚ್.ಕೆ.ಜಮಾದಾರ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರುಗಳಾದ ಶ್ರೀಶೈಲ ಮಾನೆಪ್ಪಗೋಳ, ಗಂಗಪ್ಪ ಖಂಡುಗೋಳ, ದಿನೇಶ ಕಡೇಲಿ, ಸಿದ್ಧಲಿಂಗ ನೇರ್ಲಿ, ಕೆಂಪಣ್ಣ ದೇವರಮನಿ, ಸಿದ್ದಪ್ಪ ಸತ್ತಿಗೇರಿ, ವಿಠ್ಠಲ ಜೊತ್ತೇನ್ನವರ, ಇಂದಿರಾ ಕಬ್ಬೂರ, ಕಸ್ತೂರಿ ಮಾನೆಪ್ಪಗೋಳ, ಪರಸಪ್ಪ ಪಾಟೀಲ, ಬ್ಯಾಂಕ ಪ್ರತಿನಿಧಿ ಸನ್ನಿ ಪಾಟೀಲ ಹಾಗೂ ಕಾರ್ಯದರ್ಶಿ ರಮೇಶ ಪರಕನಟ್ಟಿ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.

Related posts: