RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಗುರು ಶಿಷ್ಯ ಪರಂಪರೆಯನ್ನು ಜಗತ್ತಿಗೆ ನೀಡಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ : ಪ್ರದೀಪ ಇಂಡಿ

ಗೋಕಾಕ:ಗುರು ಶಿಷ್ಯ ಪರಂಪರೆಯನ್ನು ಜಗತ್ತಿಗೆ ನೀಡಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ : ಪ್ರದೀಪ ಇಂಡಿ 

ಗುರು ಶಿಷ್ಯ ಪರಂಪರೆಯನ್ನು ಜಗತ್ತಿಗೆ ನೀಡಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ : ಪ್ರದೀಪ ಇಂಡಿ

ಗೋಕಾಕ ಸೆ 18 : ಗುರು ಶಿಷ್ಯ ಪರಂಪರೆಯನ್ನು ಜಗತ್ತಿಗೆ ನೀಡಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ ಎಂದು ಸತೀಶ ಶುಗರ್ಸ್‍ನ ಚೇರಮನ್ ಪ್ರದೀಪ ಇಂಡಿ ಹೇಳಿದರು.
ನಗರದ ಎನ್‍ಎಸ್‍ಎಫ್ ವಸತಿ ಶಾಲೆಯ 2001-02 ಸಾಲಿನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರು ವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ ವಿದ್ಯಾರ್ಥಿಗಳ ಉಜ್ವಲ್ ಭವಿಷ್ಯಕ್ಕಾಗಿ ಶ್ರಮಿಸಿದ ಗುರುಗಳ ಸ್ಮರಣೆಯೊಂದಿಗೆ ಅವರನ್ನು ಸತ್ಕರಿಸುವದರೊಂದಿಗೆ ಗುರು-ಶಿಷ್ಯ ಪರಂಪರೆಯನ್ನು ಎತ್ತಿ ಹಿಡಿಯುವ ಈ ಕಾರ್ಯಕ್ರಮ ಮಾದರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎನ್‍ಎಸ್‍ಎಫ್ ಕಾರ್ಯದರ್ಶಿ ಎಸ್.ಎ.ರಾಮಗಾನಟ್ಟಿ, ವಸತಿ ನಿಲಯದ ಮೇಲ್ವಿಚಾರಕ ಪಿ.ಎಲ್.ಹೊಂಬಳ,ಎ.ಆರ್.ಪುಡಕಲಕಟ್ಟಿ, ಎ.ಜಿ.ಕೋಳಿ, ಸುಧೀರ ಕುಲಕರ್ಣಿ ಹಾಗೂ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಶಿಕ್ಷಕರನ್ನು ಸತ್ಕರಿಸಿದರು.

Related posts: