RNI NO. KARKAN/2006/27779|Sunday, August 3, 2025
You are here: Home » breaking news » ಮೂಡಲಗಿ:ಮೂಡಲಗಿಯಲ್ಲಿ “ ಕನ್ನಡ ದೇಶದೊಳ್ “ ಚಿತ್ರದ ಧ್ವನಿಸುರುಳಿ ಬಿಡುಗಡೆ

ಮೂಡಲಗಿ:ಮೂಡಲಗಿಯಲ್ಲಿ “ ಕನ್ನಡ ದೇಶದೊಳ್ “ ಚಿತ್ರದ ಧ್ವನಿಸುರುಳಿ ಬಿಡುಗಡೆ 

ಮೂಡಲಗಿಯಲ್ಲಿ “ ಕನ್ನಡ ದೇಶದೊಳ್ “ ಚಿತ್ರದ ಧ್ವನಿಸುರುಳಿ ಬಿಡುಗಡೆ

ಮೂಡಲಗಿ ಸೆ 15 : ನಗರದ ಬಸವರಂಗ ಮಂಟಪದಲ್ಲಿ ಕನ್ನಡ ದೇಶದೊಳ್ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭವನ್ನು ಇತ್ತಿಚಿಗೆ ಮಾಡಲಾಯಿತು.
ಗ್ರಂಥಪಾಲಕರಾದ ಬಿ.ಪಿ ಬಂದಿಯವರು ಮಾತನಾಡಿ, ನಮ್ಮ ರಾಜ್ಯದ ಕನ್ನಡ ಉಳಿವಿಗಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ದೇಶಾಭಿಮಾನ ಮತ್ತು ಭಾಷಾಭಿಮಾನ ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ರಾಜ್ಯಧಾನಿಯಲ್ಲಿ ನಡೆಯಬೇಕಾದ ಧ್ವನಿಸುರುಳಿಗಳ ಬಿಡುಗಡೆ ಗ್ರಾಮೀಣ ಭಾಗದಲ್ಲಿ ಇಂಥಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂತಸದ ವಿಷಯವಾಗಿದೆ. ನಾವೆಲ್ಲರೂ ಭಾಷಾಭಿಮಾನ ಉಳಿಸುವ ಬೆಳೆಸುವ ಇಂಥಹ ಚಿತ್ರಗಳಿಗೆ ಹೆಚ್ಚಿನ ಆದ್ಯತೆ ಕೊಟ್ಟು ಪ್ರೋತ್ಸಾಹಿಸುವುದು ಕರ್ತವ್ಯವಾಗಿದೆ ಎಂದು ಹೇಳಿದರು.
ನ್ಯಾಯವಾದಿ ಎಲ್ ವಾಯ್ ಅಡಿಹುಡಿ ಮಾತನಾಡಿ, ನಮ್ಮ ಗ್ರಾಮೀಣ ಸೊಗಡನ್ನು ಹೊಂದಿರುವ ಮತ್ತು ಚಿತ್ರೀಕರಣವೂ ಸಹಿತ ಗ್ರಾಮೀಣ ಭಾಗದಲ್ಲಿ ಮಾಡಿ ನಮ್ಮ ಭಾಷೆಗೆ ಹೆಚ್ಚು ಒತ್ತು ಕೊಟ್ಟು ಇಲ್ಲಿನ ಭಾಷಿಕರನ್ನು ಬೆಂಗಳೂರಿನಂಥಹ ಭಾಗದಲ್ಲಿ ತೋರಿಸುವುದು ಈ ಚಿತ್ರದಲ್ಲಿ ವಿಶೇಷವಾಗಿದೆ. ಅದಲ್ಲದೇ ಮೂಡಲಗಿಯ ಶ್ರೀ ಕಲ್ಮೇಶ್ವರ ವೃತ್ತ ಮತ್ತು ನಮ್ಮಶಾಲೆಯ ಆವರಣದಲ್ಲಿ ಚಿತ್ರೀಕರಣವಾಗಿದ್ದು ಸಂತೋಷದ ವಿಷಯವಾಗಿದೆ ಎಂದು ಹೇಳಿದರು.
ಮುಖಂಡರಾದ ಬಿ.ಬಿ ಹಂದಿಗುಂದ ಅವರು ಮಾತನಾಡಿ, ಈಗಿನ ತಂತ್ರಜ್ಞಾನದ ಯುಗದಲ್ಲಿ ನಮ್ಮ ಕನ್ನಡ ಭಾಷೆಯ ಬಗ್ಗೆ ಗೌರವ ಕಡಿಮೆಯಾಗಿದ್ದು ಅದಕ್ಕೆ ಇಂಥಹ ಹವ್ಯಾಸಿ ಕಲಾವಿದರು ಕೂಡಿಕೊಂಡು ನಮ್ಮ ಭಾಷೆ, ನಾಡು ನುಡಿಗಳ ಬಗ್ಗೆ ಎರಡು ಘಂಟೆಗಳ ಚಿತ್ರದಲ್ಲಿ ತೋರಿಸುವುದು ವಿಶೇಷವಾಗಿದೆ ಇಂತಹ ಕಲಾವಿದರಿಗೆ ಪ್ರೋತ್ಸಾಹಿಸುವುದು ಮುಖ್ಯವಾಗಿದೆ ಎಂದರು.
ಸ್ಥಳೀಯ ಕಲಾವಿದ ಮಂಜುನಾಥ ರೇಳೆಕರ ಮಾತನಾಡಿ, ನಮ್ಮಂಥಹ ಕಲಾವಿದರನ್ನು ಗುರುತಿಸಿ ಈ ಚಿತ್ರದಲ್ಲಿ ಅವಕಾಶ ನೀಡಿದ ಚಿತ್ರತಂಡಕ್ಕೆ ಕೃತಜ್ಞತೆ ಸಲ್ಲಿಸಿ ದೊಡ್ಡ ಚಿತ್ರದಲ್ಲಿ ನಟಿಸಿರುವುದು ನನಗೆ ಮತ್ತು ನಮ್ಮ ಊರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ನಿರ್ದೇಶಕ ಅವಿರಾಮ ಕಂಠೀರವ ಅವರು ಮಾತನಾಡಿ, ದೊಡ್ಡ ನಗರಗಳಲ್ಲಿ ನಮ್ಮ ಭಾಷೆಯ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ನೋಡಿ ಭಾಷೆಯ ಬಗ್ಗೆ ನಮ್ಮ ಜನರಲ್ಲಿ ಜಾಗ್ರತಿ ಮೂಡಿಸಬೇಕೆಂದು ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ಚಿತ್ರವನ್ನು ಹಣಕ್ಕಾಗಿ ಮಾಡಿಲ್ಲಾ ಹಣವನ್ನು ಮಾಡಲು ಸಾಕಷ್ಟು ಮಾರ್ಗಗಳಿದ್ದು ಆದರೆ ನಮ್ಮ ಭಾಷೆಯ ಉಳಿವಿಗಾಗಿ ಈ ಚಿತ್ರವನ್ನು ಮಾಡಿರುತ್ತೇವೆ. ಅದಕ್ಕಾಗಿ ಎಲ್ಲರೂ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಹೋಗಿ ವೀಕ್ಷಿಸಿ ನಮ್ಮ ಭಾಷೆ, ನಾಡು ನುಡಿಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ಕರೆ ನೀಡಿದರು ಮತ್ತು ಚಿತ್ರದ ಚಿತ್ರೀಕರಣದ ಸಮಯದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು.
ಅಧ್ಯಕ್ಷ ಸ್ಥಾನ ವಹಿಸಿದ ಉತ್ತರ ಕರ್ನಾಟಕದ ಜಾನಪದ ಕಲಾವಿದ ಶಬ್ಬೀರ ಡಾಂಗೆ ಮಾತನಾಡಿ, ಈಗಿನ ಪರಭಾಷೆಯ ವ್ಯಾಮೊಹಕ್ಕಾಗಿ ನಮ್ಮ ಹೆತ್ತ ತಾಯಿಯ ಭಾಷೆಯ ಮೇಲಿನ ಪ್ರೀತಿ ಕಡಿಮೆಯಾಗಿದ್ದು ನಮ್ಮ ಭಾಷೆ, ಸಂಸ್ಕøತಿಯನ್ನು ಉಳಿಸಲು ಹೆಚ್ಚಿನ ಆದ್ಯತೆ ನೀಡಬೇಕೆಂದು ಹೇಳಿದರು.
ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ ಕಾರ್ಯಕ್ರಮ ಉದ್ಘಾಟಿಸಿದರು. ಪುರಸಭೆ ಸದಸ್ಯ ಹನಮಂತ ಗುಡ್ಲಮನಿ, ನಿರ್ಮಾಪಕ ವಿನೋದ ಎಚ್ ಗೌಡ, ನಿರ್ದೆಶಕÀ ಅವಿರಾಮ ಕಂಠೀರª,À ಕಿರುಚಿತ್ರ ನಿರ್ದೇಶಕ ಓಂ ಸಂತಾ, ಸುರೇಶ ಬೆಳವಿ, ಕುಮಾರ ಮೋಮಿನ ಅವರನ್ನು ಸನ್ಮಾನಿಸಲಾಯಿತು.
ಜಯಕರ್ನಾಟಕ ಸೇನೆ ತಾಲೂಕ ಅಧ್ಯಕ್ಷ ಶಿವರೆಡ್ಡಿ ಹುಚರೆಡ್ಡಿ, ಮಹಾದೇವ ಪೋತದಾರ, ಸಿದ್ದಣ್ಣ ದುರದುಂಡಿ, ಆಯೂಬ ಕಲಾರಕೊಪ್ಪ, ಸುಧೀರ ನಾಯರ್, ಸುಭಾಸ ಗೊಡ್ಯಾಗೋಳ, ವಿಠ್ಠಲ ಶಾಬನ್ನವರ, ಭಗವಂತ ಉಪ್ಪಾರ, ಗುರುನಾಥ ಗಂಗನ್ನವರ, ವಿಶಾಲ ರೇಳೆಕರ, ಸಂಜು ಅರಭಾವಿ, ವಿಜಯ ಕಂಕಣವಾಡಿ, ರಾಕೇಶ ರೇಳೆಕರ, ಕೆ.ಗಜು, ಸುರೆಶ ತಂಶಿ ಹರಿಶ ಅರಸು, ಶಶಿಧರ ಘಟ್ಟಿಮುತ್ತು, ಕನ್ನಡ ದೇಶದೊಳ್ ಚಿತ್ರತಂಡದವರು ಉಪಸ್ಥಿತರಿದ್ದರು.
ಶಿಕ್ಷಕ ಬಸವರಾಜ ಸಸಾಲಟ್ಟಿ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

Related posts: