RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ಭಾರತದ ಪ್ರತಿಯೊಬ್ಬ ಪ್ರಜೆ ಸುಶಿಕ್ಷಿತರಾಗಬೇಕು : ಎಸ.ಜಿ.ಬಳೋಬಾಳ

ಗೋಕಾಕ:ಭಾರತದ ಪ್ರತಿಯೊಬ್ಬ ಪ್ರಜೆ ಸುಶಿಕ್ಷಿತರಾಗಬೇಕು : ಎಸ.ಜಿ.ಬಳೋಬಾಳ 

ಭಾರತದ ಪ್ರತಿಯೊಬ್ಬ ಪ್ರಜೆ ಸುಶಿಕ್ಷಿತರಾಗಬೇಕು : ಎಸ.ಜಿ.ಬಳೋಬಾಳ
ಗೋಕಾಕ ಸೆ 8 : ಭಾರತದ ಪ್ರತಿಯೊಬ್ಬ ಪ್ರಜೆ ಸುಶಿಕ್ಷಿತರಾಗದಾಗ ಮಾತ್ರ ಭವ್ಯ ಭಾರತವನ್ನು ಕಟ್ಟಲು ಸಾಧ್ಯ ಎಂದು ಎಸಡಿಎಂಸಿ ಅಧ್ಯಕ್ಷ ಎಸ.ಜಿ.ಬಳೋಬಾಳ ಹೇಳಿದರು .

ಮೇಲ್ಮನಹಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರದಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಹಾಗೂ ಪಾಲಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು

ಕಳೆದ ಹಲವು ದಶಕಗಳಲ್ಲಿ ಭಾರತ ದೇಶದ ಸಾಕ್ಷರತೆ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದ್ದು ಇದನ್ನು ಕಾಯ್ದುಕೊಂಡು ಹೋಗಲು ಪ್ರತಿಯೊಬ್ಬ ಭಾರತೀಯ ಸುಶಿಕ್ಷತನಾಗಿ ಒಳ್ಳೆಯ ಪ್ರಜೆಯಾಗಬೇಕಾಗಿದೆ ಆ ದಿಸೆಯಲ್ಲಿ ಎಲ್ಲರೂ ಮುಂದೆ ಬರಬೇಕೆಂದು ಬಳೋಬಾಳ ಹೇಳಿದರು

ಈ ಸಭೆಯಲ್ಲಿ ಮುಖ್ಯೋಪಾಧ್ಯಾಯ ಶ್ರೀಮತಿ ಎಸ.ಬಿ ಬಳಗಲಿ , ಎಸ್.ಎಸ್.ಶಿಗಿಹೋಳಿ , ಎಂ.ಬಿ.ಗೋರಬಾಳ , ಗೋಪಾಲ ಹಾಲಗೇರಿ , ಎಸ್. ಡಿ. ಎಮ್. ಸಿ ಸದಸ್ಯರು ಹಾಗೂ ಗ್ರಾಮಸ್ಥರು ಮತ್ತು ಶಿಕ್ಷಕ ಸಿಬ್ಬಂದಿಯವರು ಹಾಜರಿದ್ದರು

Related posts: