RNI NO. KARKAN/2006/27779|Sunday, February 15, 2026
You are here: Home » breaking news » ಖಾನಾಪುರ:ಭೀಕರ ಅಪಘಾತ ಒಬ್ಬನ ದುರ್ಮರಣ

ಖಾನಾಪುರ:ಭೀಕರ ಅಪಘಾತ ಒಬ್ಬನ ದುರ್ಮರಣ 

ಭೀಕರ ಅಪಘಾತ ಒಬ್ಬನ ದುರ್ಮರಣ

ಖಾನಾಪುರ ಅ 29 : ತಾಲೂಕಿನ ಬೀಡಿ ಗ್ರಾಮದಲ್ಲಿರುವ ಹೆಸ್ಕಾಂ ಕಛೇರಿ ಹತ್ತಿರ ಬುಧುವಾರ ಮದ್ಯಾಹ್ನ ಜವರಾಯ ಅಟ್ಟಹಾಸ ಮೆರೆದಿದ್ದಾನೆ.

ಬೀಡಿ ಕಡೆಯಿಂದ ಬೆಳಗಾವಿ ಕಡೆಗೆ ಹೊರಟ ಟ್ರಕ್ ಚಾಲಕನ ನಿಯಂತ್ರಣ ಮುಂಬದಿಯಿಂದ ಬರುವ ಕಾರಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದು. ಇಬ್ಬರಿಗೆ ಗಂಭೀರ ಗಾಯವಾಗಿದೆ.

ವಿನಾಯಕ ದಶರಥ ಮರಾಠೆ(೨೧) ಮೃತ ಯುವಕ. ದಶರಥ ಮರಾಠಿ ಮತ್ತು ಸುಭಾಷ ಆರೇರ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಆಸ್ಪತ್ರಗೆ ದಾಖಲಸಲಾಗಿದೆ.

ಕಾರಿನಲ್ಲಿದ್ದವರು ಗೋಕಾಕ ತಾಲೂಕಿನ ಗುಡಿಹಾಳ ಗ್ರಾಮದವರಾಗಿದ್ದು, ಗೋಕಾಕನಿಂದ ಉಡುಪಿ ಕಡೆಗೆ ಪ್ರಯಾಣ ಬೆಳೆಸಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ನಂದಗಡ ಠಾಣೆಯ ಪಿ.ಎಸ್.ಐ ಸುಮಾ‌ ನಾಯಕ ಪರಿಶೀಲನೆ ನಡೆಸಿದರು. ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts: