RNI NO. KARKAN/2006/27779|Friday, February 13, 2026
You are here: Home » breaking news » ಗೋಕಾಕ:ರಕ್ಷಾ ಬಂಧನ ನಿಮಿತ್ಯ ಮಹಿಳೆಗೆ ಶೌಚಾಲಯ ಉಡುಗೊರೆ

ಗೋಕಾಕ:ರಕ್ಷಾ ಬಂಧನ ನಿಮಿತ್ಯ ಮಹಿಳೆಗೆ ಶೌಚಾಲಯ ಉಡುಗೊರೆ 

ರಕ್ಷಾ ಬಂಧನ ನಿಮಿತ್ಯ ಮಹಿಳೆಗೆ ಶೌಚಾಲಯ ಉಡುಗೊರೆ

ಗೋಕಾಕ ಅ 27 : ತಾಲೂಕಿನ ಗೋಸಬಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಬಗರನಾಳ ಗ್ರಾಮದಲ್ಲಿ ಗ್ರಾ.ಪಮ ವತಿಯಿಂದ ರವಿವಾರದಂದು ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಗ್ರಾಮದ ಮಹಿಳೆಗೆ ಶೌಚಾಲಯ ನಿರ್ಮಿಸಿ ರಕ್ಷಾ ಬಂಧನದ ಉಡುಗೊರೆಯಾಗಿ ಗ್ರಾಮ ಪಂಚಾಯತ ಅಧ್ಯಕ್ಷ ಶಿವಲಿಂಗಪ್ಪ ಬಳಿಗಾರ ನೀಡಿದರು.
ನಂತರ ಮಾತನಾಡಿದ ಗ್ರಾ.ಪಂ ಅಧ್ಯಕ್ಷ ಶಿವಲಿಂಗಪ್ಪ ಬಳಿಗಾರ ಅವರು ಸ್ವಚ್ಛ ಭಾರತ ಕನಸನ್ನು ನನಸು ಮಾಡಲು ನಮ್ಮ ಗ್ರಾಮ ಪಂಚಾಯತ ವತಿಯಿಂದ ನೂರಕ್ಕೆ ನೂರರಷ್ಟು ಶೌಚಾಲಯದ ವ್ಯವಸ್ಥೆಯನ್ನು ಮಾಡಿದ್ದೇವೆ. ರಕ್ಷಾ ಬಂಧನ ಕೇವಲ ರಾಖಿ ಕಟ್ಟಿಕೊಂಡು ಸಹೋದರಿಯರಿಗೆ ಹಣ, ಒಡವೆ, ಸಮವಸ್ತ್ರ ನೀಡುವುದಕಿಂತ ಮೂಲಭೂತ ಸೌಲಭ್ಯವಾದ ಶೌಚಾಲಯವನ್ನು ಕಟ್ಟಿಕೊಡಬೇಕೆಂದು ಹೇಳಿದರಲ್ಲದೇ ಬಹಿದೆರ್ಸೆಗೆ ಹೋರಗಡೆ ಹೋಗುವುದರಿಂದ ರೋಗರುಜಿನಗಳು ಹರಡುತ್ತಿವೆ. ಆದ್ದರಿಂದ ಉತ್ತಮ ಆರೋಗ್ಯಕ್ಕಾಗಿ ಶೌಚಾಲಯ ನಿರ್ಮಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಿದ್ದಪ್ಪ ಅಡವಿ, ಕುಮಾರ ಮಲ್ಲಪ್ಪ ಹಾವಾಡಿ, ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಯಲ್ಲಪ್ಪ ಹೊಸಮನಿ, ಕಾರ್ಯದರ್ಶಿ ಈರಪ್ಪ ಕುಂದರಗಿ, ಗುಮಾಸ್ತ ಪರಮೇಶ್ವರ ಕಡಕೋಳ ಸೇರಿದಂತೆ ಸಿಬ್ಬಂದಿ ಹಾಗೂ ಗ್ರಾಮದ ಪ್ರಮುಖರು ಇದ್ದರು.

Related posts: