RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಸ್ವಾತಂತ್ಯ್ರೋತ್ಸವದ ದಿನವನ್ನು ಹಸಿರು ಸ್ವಾತಂತ್ರ್ಯದ ದಿನವನ್ನಾಗಿ ಆಚರಣೆ

ಗೋಕಾಕ:ಸ್ವಾತಂತ್ಯ್ರೋತ್ಸವದ ದಿನವನ್ನು ಹಸಿರು ಸ್ವಾತಂತ್ರ್ಯದ ದಿನವನ್ನಾಗಿ ಆಚರಣೆ 

ಸ್ವಾತಂತ್ಯ್ರೋತ್ಸವದ ದಿನವನ್ನು ಹಸಿರು ಸ್ವಾತಂತ್ರ್ಯದ ದಿನವನ್ನಾಗಿ ಆಚರಣೆ
ಗೋಕಾಕ ಅ 18 : “ಹಸಿರೇ ಉಸಿರು” ಎಂಬ ನಾಣ್ಣುನುಡಿಯಂತೆ ಸ್ವಾತಂತ್ಯ್ರೋತ್ಸವದ ದಿನಾಚರಣೆಯನ್ನು ಹಸಿರು ಸ್ವಾತಂತ್ರ್ಯದ ದಿನವನ್ನಾಗಿ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದ ಟಿಇಎಸ್ ಪ್ರೌಢಶಾಲೆ ಆಚರಿಸಲಾಯಿತು. ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷ ಎಂ. ಎಲ್. ಮುತ್ತೆಣ್ಣವರ ಅವರು ನೆರೆವೇರಿಸಿ ತ್ಯಾಗ ಬಲಿದಾನದ ಪ್ರತೀಕವಾದ ಈ ಸ್ವಾತಂತ್ರ ಎಲ್ಲರಿಗೂ ಶುಭವನ್ನು ಕೋರಲೆಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಯರು ಸ್ವಾಗತಿಸಿದರು. ಬಿ. ಜಿ. ಬಾನೆ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕ ಯು. ಬಿ. ಮುತ್ನಾಳ ಧ್ವಜವಂದನೆ ಕಾರ್ಯಕ್ರಮವನ್ನು ನಿರೂಪಿಸಿದರು.

Related posts: