ಗೋಕಾಕ:ಸೈನಿಕ ಹುಳುವಿನ ಬಾದೆ ಪರಿಶೀಲನೆ
ಸೈನಿಕ ಹುಳುವಿನ ಬಾದೆ ಪರಿಶೀಲನೆ
ಗೋಕಾಕ ಅ 14 : ತಾಲೂಕಿನ ವಿವಿಧ ಗ್ರಾಮಗಳ ಗೋವಿನ ಜೋಳ ಬೆಳೆದ ಕ್ಷೇತ್ರಗಳಿಗೆ ದಿ.13ರಂದು ಬೆಳಗಾವಿ ಜಿಲ್ಲೆ ಜಂಟಿ ಕೃಷಿ ನಿರ್ದೇಶಕ ಜಲಾನಿ ಮೋಕಾಶಿ ಹಾಗೂ ಅರಭಾವಿ ಕೃಷಿ ವಿಜ್ಞಾನ ಕೇಂದ್ರದ ಡಾ| ಲೊಕೇಶ ಅವರು ಭೇಟಿ ಕೊಟ್ಟು ಸೈನಿಕ ಹುಳುವಿನ ಬಾದೆಯನ್ನು ಪರಿಶೀಲಿಸಿದರು.
ಸಹಾಯಕ ಕೃಷಿ ನಿರ್ದೇಶಕ ಎ.ಡಿ ಸವದತ್ತಿ ಅವರು ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಾಲೂಕಿನಲ್ಲಿ 36203 (ಹೇ) ಕ್ಷೇತ್ರ ಗೋವಿನ ಜೋಳ ಬಿತ್ತನೆ ಯಾಗಿದ್ದು ಸದರಿ ಬೆಳೆಯಲ್ಲಿ ಶೇಕಡಾ 10% ರಿಂದ 15% ಬೆಳೆ ಕೀಟದ ಬಾದೆಗೆ ಒಳಗಾಗಿದೆ. ಇಲ್ಲಿಯ ಕೃಷಿ ಇಲಾಖೆ ಸಿಬ್ಬಂದಿ ಗ್ರಾಮ ಹಾಗೂ ಕ್ಷೇತ್ರ ಮಟ್ಟದಲ್ಲಿ ತರಬೇತಿಗಳನ್ನು ಏರ್ಪಡಿಸಿ ಹತೋಟಿ ಕ್ರಮದ ವ್ಯಾಪಕ ಪ್ರಚಾರ ಕೈಗೊಂಡಿದ್ದಾರೆ. ಹತೋಟಿಗಾಗಿ ಇಮಾಮೆಕ್ಟೀಟಿನ್ ಬೆಂಜೋಯೆಟ್ 0.2 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೇರಿಸಿ ಸಿಂಪಡಿಸಬೇಕು. ರೈತ ಸಂಪರ್ಕ ಕೇಂದ್ರಗಳಲ್ಲಿ ಸಸ್ಯ ಸಂರಕ್ಷಣಾ ಔಷಧ ದಾಸ್ತಾನುವಿದ್ದು ರೈತರು ಅದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.