ಗೋಕಾಕ:ನಗರಸಭೆಯಿಂದ ಕಲುಷಿತ ನೀರು ಪೂರೈಕೆ: ಜನರಲ್ಲಿ ಆತಂಕ

ನಗರಸಭೆಯಿಂದ ಕಲುಷಿತ ನೀರು ಪೂರೈಕೆ: ಜನರಲ್ಲಿ ಆತಂಕ
ಗೋಕಾಕ ಅ 2 : ಕಳೆದ ಎರೆಡು ದಿನಗಳಿಂದ ನಗರದಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ನಗರದ ಘಟಪ್ರಭಾ ನದಿಯಿಂದ ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ನಗರದಲ್ಲಿರುವ ನೀರು ಶುದ್ಧೀಕರಣ ಘಟಕದಲ್ಲಿ ನೀರು ಶುದ್ಧೀಕರಿಸಿ ಸರಬರಾಜು ಮಾಡಲಾಗುತ್ತಿದೆ. ಆದರೂ ಜನರು ಕಳೆದ ಎರೆಡು ದಿನಗಳಿಂದ ಕಲುಷಿತ ನೀರೇ ಕುಡಿಯುವಂತಾಗಿದೆ. ನಗರದಲ್ಲಿ ಬಹುತೇಕ ಕಡೆ ನೀರಿನ ಪೈಪ್ ಒಡೆದು ಮಳೆ ನೀರು, ಚರಂಡಿ ನೀರು ಸೇರಿ ಕಲುಷಿತಗೊಳ್ಳುತ್ತಿದೆ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಕಲುಷಿತ ನೀರು ಸರಬರಾಜಾಗಿ ಜನರಲ್ಲಿ ಆತಂಕ ಸೃಷ್ಟಿಯಾಗಿದ್ದರು ಸಹ ನಗರಸಭೆ ಅಧಿಕಾರಿಗಳು ಇದರ ಬಗ್ಗೆ ಇಲ್ಲಿಯವರೆಗೆ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲಾ.
ನಲ್ಲಿ ನೀರು ದುರ್ವಾಸನೆ: ಸರಬರಾಜಾಗುತ್ತಿರುವ ನಲ್ಲಿ ನೀರು ದುರ್ವಾಸನೆ ಬೀರುತ್ತಿದೆ. ಇದನ್ನು ಹೇಗೆ ಕುಡಿಯುವುದು ಎಂಬುದೆ ಸಾರ್ವಜನಿಕರಿಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಮುಖ್ಯ ಪೈಪ್‌ಗಳನ್ನು ಸ್ವತ್ಛಗೊಳಿಸಿ ನೀರು ಹರಿಸಲಾಗುತ್ತಿದ್ದರು ಸಹ ಇದೀಗ ದುರ್ವಾಸನೆಯೊಂದಿಗೆ ನೀರು ಹರಿದು ಬರುತ್ತಿದೆ. ನಗರಸಭೆ ಪೌರಾಯುಕ್ತ ,ನೀರು ಸರಬರಾಜು ಅಭಿಯಂತರರು, ನಗರಸಭೆ ಅಧ್ಯಕ್ಷರು ಎಚ್ಚೆತ್ತುಕೊಂಡು ಕೂಡಲೇ ಇದನ್ನು ಸರಿಪಡಿಸಿ ನಗರಕ್ಕೆ ಸ್ವಚ್ಛ ನೀರು ಸರಬರಾಜು ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.