ಗೋಕಾಕ:ದಿ.12ರಿಂದ ಸಪ್ಟಂಬರ್ 9ರವರೆಗೆ ಪ್ರತಿದಿನ ಸಾಯಂಕಾಲ 7 ಗಂಟೆಗೆ ಪ್ರವಚನ ಕಾರ್ಯಕ್ರಮ
ದಿ.12ರಿಂದ ಸಪ್ಟಂಬರ್ 9ರವರೆಗೆ ಪ್ರತಿದಿನ ಸಾಯಂಕಾಲ 7 ಗಂಟೆಗೆ ಪ್ರವಚನ ಕಾರ್ಯಕ್ರಮ
ಗೋಕಾಕ ಅ 10 : ಇಲ್ಲಿಯ ವಿವೇಕಾನಂದ ನಗರದ ಶ್ರೀ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ಯ ಶ್ರೀ ಅವಧೂತ ನಾಗಲಿಂಗ ಮಹಾತ್ಮರ ಚರಿತ್ರೆಯ ಪ್ರವಚನ ಕಾರ್ಯಕ್ರಮವು ದಿ.12ರಿಂದ ಸಪ್ಟಂಬರ್ 9ರವರೆಗೆ ಪ್ರತಿದಿನ ಸಾಯಂಕಾಲ 7 ಗಂಟೆಗೆ ಜರುಗಲಿದೆ.
ಪ್ರವಚನ ಕಾರ್ಯಕ್ರಮದ ಉದ್ಘಾಟನೆಯನ್ನು ರವಿವಾರದಂದು ದೇವಸ್ಥಾನದ ಆವರಣದಲ್ಲಿ ಸಂಜೆ 7 ಗಂಟೆಗೆ ಜರುಗಲಿದ್ದು ದಿವ್ಯ ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ವಹಿಸುವರು. ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಯುವ ಧುರೀಣ ಲಖನ್ ಜಾರಕಿಹೊಳಿ, ಬಸವರಾಜ ಇಳಿಗೇರ, ಮಹಾಂತೇಶ ತಾಂವಶಿ,ಎಸ್.ಆರ್.ಕಪ್ಪಲಗುದ್ದಿ, ಭಾರತಿ ಹತ್ತಿ, ಕೆ.ಬಿ.ಮಾದೇಗೌಡ, ವಿಜಯ ಭೂಜನ್ನವರ ಹಾಗೂ ಪ್ರವಚನಕಾರ ಬಸವರಾಜ ಶರಣರು ಆಗಮಿಸುವರು. ಸರ್ವ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಶ್ರೀ ಶಿವಲಿಂಗೇಶ್ವರ ವಿಕಾಸ ಸಮಿತಿ ಅಧ್ಯಕ್ಷ ಬಿ.ಬಿ.ಕಾಪಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.