RNI NO. KARKAN/2006/27779|Sunday, August 3, 2025
You are here: Home » breaking news » ಘಟಪ್ರಭಾ:ಪ್ರತಿಭಾ ಕಾರಂಜಿಯಲ್ಲಿ ಅರಳಿದ ಜ್ಞಾನ ಗಂಗೋತ್ರಿಯ ಪ್ರತಿಭೆಗಳು

ಘಟಪ್ರಭಾ:ಪ್ರತಿಭಾ ಕಾರಂಜಿಯಲ್ಲಿ ಅರಳಿದ ಜ್ಞಾನ ಗಂಗೋತ್ರಿಯ ಪ್ರತಿಭೆಗಳು 

ಪ್ರತಿಭಾ ಕಾರಂಜಿಯಲ್ಲಿ ಅರಳಿದ ಜ್ಞಾನ ಗಂಗೋತ್ರಿಯ ಪ್ರತಿಭೆಗಳು

ಘಟಪ್ರಭಾ ಅ 7 : ಸಮೀಪದ ರಾಜಾಪೂರ ಗ್ರಾಮದ ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯ ವಿಧ್ಯಾರ್ಥಿಗಳು ಮಂಗಳವಾರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ರಾಜಾಪೂರ ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸಾಧನೆಯನ್ನು ಗೈದು 18 ಸ್ಪರ್ಧೆಗಳಲ್ಲಿ ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರಕಾಶ ಲ.ಯಾದಗೂಡ ಇಂಗ್ಲೀಷ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ, ಪ್ರವೀಣ ಮ. ಹೊಸೂರ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ, ಲಕ್ಷ್ಮೀ ಸ.ಮಗದುಮ ಹಿಂದಿ ಕಂಠಪಾಠ ಪ್ರಥಮ, ಸುದೀಪ ಗಂ.ಗಿಡ್ಡಾಳಿ ಧಾರ್ಮಿಕ ಪಠನ ಪ್ರಥಮ, ಅಕ್ಷಯ ಕಾ. ಪತ್ತಾರ ಲಘು ಸಂಗೀತ ಪ್ರಥಮ, ಬಾಳೇಶ ಸಿ. ಜಟ್ಟೆನ್ನವರ ಕಥೆ ಹೇಳುವುದು ಪ್ರಥಮ, ವಿದ್ಯಾಶ್ರೀ ಮ.ಹೊಸೂರ ಅಭಿನಯ ಗೀತೆ ಪ್ರಥಮ, ಸುನಿತಾ ಗಿಡ್ಡಾಳಿ ಭಕ್ತಿ ಗೀತೆ ಪ್ರಥಮ, ಮಹೇಶ ಮ. ಕೆಂಪವ್ವಗೋಳ, ಅಕ್ಷತಾ ಕೆಂ.ಹೊಸೂರ ಹಾಗೂ ಸಂಗಡಿಗರು ದೇಶಭಕ್ತಿಗೀತೆ ಪ್ರಥಮ, ಸಾಜಿಯಾ ಯಾಸಿನ ಮಸ್ತೋಳಿ ಹಾಗೂ ಸಂಗಡಿಗರು ಕವ್ವಾಲಿ ಪ್ರಥಮ, ವಿಕಾಸ ವಿಠ್ಠಲ ಕೊಡ್ಲಿ ಛದ್ಮವೇಷ ದ್ವಿತೀಯ, ಸ್ಥಾನ ಒಳಗೋಂಡಂತೆ ಬಾಗವಹಿಸಿದ 13 ಸ್ಪರ್ಧೆಗಳ ಪೈಕಿ 12 ಸ್ಪರ್ಧೆಗಲ್ಲಿ ಗೆಲುವಿನ ನಗೆ ಬೀರಿ ತಾಲೂಕಾ ಹಂತಕ್ಕೆ ಆಯ್ಕೆಯಾಗಿದ್ದಾರೆ.
1 ರಿಂದ 4ನೇ ತರಗತಿಯ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ವಿನೋದ ಲಕ್ಷ್ಮಣ ಯಾದಗೂಡ ಕನ್ನಡÀ ಕಂಠಪಾಠ ಪ್ರಥಮ, ಐಶ್ವರ್ಯಾ ಕರೆಪ್ಪ ಕೊಡ್ಲಿ ಇಂಗ್ಲೀಷ ಕಂಠಪಾಠ ಪ್ರಥಮ, ಮಂಜುನಾಥ ಮ.ಬೆಳವಿ ಧಾರ್ಮಿಕ ಪಠನ ಪ್ರಥಮ, ಸೃಷ್ಠಿ ಗ.ಹೊಸೂರ ಲಘು ಸಂಗೀತ ಪ್ರಥಮ, ಮಂಜುನಾಥ ಜ್ಯೋ. ಖನದಾಳಿ ಕಥೆ ಹೇಳುವುದು ಪ್ರಥಮ, ಗಣೇಶ ರಾ. ನಾವಿ ಕ್ಲೇ ಮಾಡಲಿಂಗ್ ಪ್ರಥಮ, ಅಯಾನ ಲಾಡಖಾನ ಹಾಗೂ ಸಂಗಡಿಗರು ಕವ್ವಾಲಿ ಪ್ರಥಮ, ಯಶೋದಾ ಮ. ಬಿಟ್ಟೇರ ಛದ್ಮವೇಷ ದ್ವಿತೀಯ, ಶಿವಾನಂದ ವಿ. ಕೊಡ್ಲಿ ಚಿತ್ರಕಲೆ ದ್ವಿತೀಯ, ಸೃಷ್ಠಿ ಕು. ಮಾಯಾಚಾರಿ ಅಭಿನಯಗೀತೆ ದ್ವಿತೀಯ, ಸುಪ್ರೀತಾ ಮಾ. ಅರಿಕೇರಿ ಭಕ್ತಿಗೀತೆ ದ್ವಿತೀಯ, ಮಂಜುನಾಥ ಮ. ಬೆಳವಿ ಆಶುಭಾಷಣ ದ್ವಿತೀಯ, ರಾಜೇಶ್ವರಿ ಸಂ ಪಾಟೀಲ ಹಾಗೂ ಸಂಗಡಿಗರು ದೇಶಭಕ್ತಿಗೀತೆ ದ್ವಿತೀಯ ಸ್ಥಾನ ಒಳಗೊಂಡಂತೆ ಕಿರಿಯ ಪ್ರಾಥಮಿಕ ವಿಭಾಗದಲ್ಲಿ 7 ಸ್ಪರ್ದೆಗಳಲ್ಲಿ ಪ್ರಥಮ, 05 ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಬಾಗವಹಿಸಿದ ಎರಡೂ ವಿಭಾಗ ಎಲ್ಲ ಸ್ಪರ್ದೆಗಲ್ಲಿಯೂ ಬಹುಮಾನ ಗಳಿಸಿ 18 ಸ್ಪರ್ದೆಗಳಲ್ಲಿ ತಾಲೂಕಾ ಹಂತಕ್ಕೆ ಆಯ್ಕೆಯಾಗಿ ಶಾಲೆಯ ಹಾಗೂ ಗ್ರಾಮದ ಕೀರ್ತಿಯನ್ನು ಹೆಚ್ಚಿದ್ದಾರೆ.
ಸಾಧನೆ ಮಾಡಿದ ಮಕ್ಕಳಿಗೆ ಹಾಗೂ ತರಬೇತಿ ನೀಡಿದ ಶಾಲೆಯ ಪ್ರಧಾನ ಗುರುಗಳಿಗೆ, ಗುರು ಮಾತೆಯರಿಗೆ ಸಂಸ್ಥೆಯ ಅಧ್ಯಕ್ಷರಾದ ಶಿವಪುತ್ರ ಲ.ಗುಂಡಪ್ಪಗೋಳ, ಆಡಳಿತ ಮಂಡಳಿಯ ಸದಸ್ಯರು ಹಾಗೂ ಗ್ರಾಮದ ಗುರು-ಹಿರಿಯರು ಎಲ್ಲ ಮಕ್ಕಳಿಗೆ ಹಾರೈಸಿ ಈ ಗೆಲುವಿನ ಅಭಿಯಾನ ರಾಜ್ಯ ಮಟ್ಟದ ವರೆಗೆ ಮುಂದುವರೆಯಲಿ ಎಂದು ಆಶಿರ್ವದಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Related posts: