RNI NO. KARKAN/2006/27779|Saturday, August 2, 2025
You are here: Home » breaking news » ಬೆಳಗಾವಿ :ಸತೀಶ ಶುರ್ಗಸ ಕ್ಲಾಸಿಕ್ ಗ್ರಾಮೀಣ ಕ್ರೀಡಾಪಟುಗಳಿಗೆ ಸ್ವೂರ್ತಿಯಾಗಿದೆ : ಎಐಸಿಸಿ ಕಾರ್ಯದರ್ಶಿ ಸತೀಶ

ಬೆಳಗಾವಿ :ಸತೀಶ ಶುರ್ಗಸ ಕ್ಲಾಸಿಕ್ ಗ್ರಾಮೀಣ ಕ್ರೀಡಾಪಟುಗಳಿಗೆ ಸ್ವೂರ್ತಿಯಾಗಿದೆ : ಎಐಸಿಸಿ ಕಾರ್ಯದರ್ಶಿ ಸತೀಶ 

ಸತೀಶ ಶುರ್ಗಸ ಕ್ಲಾಸಿಕ್ ಗ್ರಾಮೀಣ ಕ್ರೀಡಾಪಟುಗಳಿಗೆ ಸ್ವೂರ್ತಿಯಾಗಿದೆ :  ಎಐಸಿಸಿ ಕಾರ್ಯದರ್ಶಿ ಸತೀಶ 

ಬೆಳಗಾವಿ ಡಿ 17 : ಸತೀಶ ಶುರ್ಗಸ ಕ್ಲಾಸಿಕ್ ಧೇಹದ್ಯಾರ್ಡ ಸ್ವರ್ಧೆ ಗ್ರಾಮೀಣ ಕ್ರೀಡಾಪಟುಗಳಿಗೆ ಸ್ವೂರ್ತಿಯಾಗಿದೆ  ಎಂದು ಕಾರ್ಯಕ್ರಮದ ರೂವಾರಿ , ಎಐಸಿಸಿ ಕಾರ್ಯದರ್ಶಿ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು

ರವಿವಾರದಂದು ಸಾಯಂಕಾಲ ನಗರದ ಸರದಾರ ಹೈಸ್ಕೂಲ್ ಮೈದಾನದಲ್ಲಿ ಸತೀಶ ಜಾರಕಿಹೊಳಿ ಪೌಂಡೇಶನ ಆಶ್ರಯದಲ್ಲಿ ನಡೆದ 10 ನೇ ಮಿ.ಸತೀಶ ಶುಗರ್ಸ ಕ್ಲಾಸಿಕ್-2017 ಮೂರು ದಿನಗಳ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಅಂತಿಮ ಹಂತದ  ದೇಹದಾರ್ಢ್ಯ ಸ್ಪರ್ಧೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಕಳೆದ ಹತ್ತು ವರ್ಷಗಳಿಂದ ನಡೆಯುತ್ತಿರುವ ಧೇಹದ್ಯಾರ್ಡ ಸ್ವರ್ಧೆಯು ರಾಜ್ಯ , ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು  ಸಂತಸದ ಸಂಗತಿಯಾಗಿದ್ದು ಪ್ರತಿ ವರ್ಷ ಈ ಸ್ವರ್ಧೆಯಲ್ಲಿ ಭಾಗವಹಿಸಲು ರಾಷ್ಟ್ರ ಮತ್ತು ರಾಜ್ಯ ಮಟ್ಟದ  ಧೇಹದ್ಯಾರ್ಡ ಪಟುಗಳು ಉತ್ಸುಕತೆ ತೋರುತ್ತಿರುವುದು ಈ ಸ್ವರ್ಧೆಯ ಹೆಮ್ಮಯಾಗಿದೆ . ಬರುವ ದಿನಗಳಲ್ಲಿ ಇನ್ನೂ ಅಚ್ಚುಕಟ್ಟಾಗಿ ಸಂಘಟಿಸಿ ಸತೀಶ ಶುರ್ಗಸ್ ಕ್ಲಾಸಿಕ್ ಸ್ವರ್ಧೆಯಿಂದ ಬೆಳಗಾವಿಯ ಹೆಸರನ್ನು   ರಾಷ್ಟ್ರ , ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸುವುದೇ ನಮ್ಮ ಉದ್ದೇಶವಾಗಿದೆ  ಎಂದ ಸತೀಶ ಜಾರಕಿಹೊಳಿ ಅವರು ಮೌಂಟೇವರೇಸ್ಟ್ ಎರಿದ ತೇನಸಿಂಗನ ಜೊತೆಗೂಡಿ ಹಲವಾರು ಕಾರ್ಯಕರ್ತರು ಕೆಲಸ ಮಾಡಿದರೂ ಸಹ ಅವರ ಹೆಸರು ಎಲ್ಲಿಯೂ ಪ್ರಸ್ತಾಪ ವಾಗಿಲ್ಲಾ ಹಾಗೆಯೇ ಈ ಸಂದರ್ಭದಲ್ಲಿ ಸ್ವರ್ಧೆಯನ್ನು ಸಂಘಟಿಸಲು ನೂರಾರು ಕಾರ್ಯಕರ್ತರು ಹಗಳಿರುಳು ಶ್ರಮಿಸುತ್ತಾರೆ ಎಂದು ಕಾರ್ಯಕ್ರಮದ ಸಂಘಟಕರ  ಶ್ರಮವನ್ನು ನೆನೆದರು

ಒಟ್ಟು 40 ಲಕ್ಷ ರೂ. ಬಹುಮಾನ ಮೊತ್ತದ ಚಾಂಪಿಯನ್‍ಶಿಪ್ ಗೆ ಅದ್ಧೂರಿ ವಿದಾಯ ದೊರೆಯುವದರೊಂದಿಗೆ ಮೂರು ದಿನಗಳ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ದೇಹದಾರ್ಢ್ಯ ಸ್ಪರ್ಧೆಗಳು ಸಮಾರೊಪಗೊಂಡವು

ಈ ಸಂದರ್ಭದಲ್ಲಿ ಪ್ರೇಮಚಂದ ಡೇಂಗ್ರಾ , ಚೇಥನ ಫಟಾರೇ , ರಾಹುಲ್ ಜಾರಕಿಹೊಳಿ ,ಕುಮಾರಿ ಪ್ರೀಯಾಂಕಾ ಜಾರಕಿಹೊಳಿ , ರವೀಂದ್ರನಾಥ ರೇ ,  ಅಜಿತ್ ಸಿದ್ದನ್ನವರ, ಚಾಂಪಿಯನ್‍ಶಿಪ್ ಸಂಘಟನೆಯಲ್ಲಿ ಸಕ್ರೀಯರಾಗಿರುವ ಕಲಾವಿದ ರಿಯಾಜ್ ಚೌಗುಲಾ, ಸಂಜು  ದೇವರಮನಿ, ಎಸ್.ಎ.ರಾಮಗಾನಟ್ಟಿ, ಸುನೀಲ ಅಪ್ಪಟೇಕರ ,   ಮತ್ತಿತರರು ಇದ್ದರು.

Related posts: