RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಧರ್ಮಸ್ಥಳ ಸಂಸ್ಥೆಯ ಮಹಿಳಾ ಜ್ಞಾನ ವಿಕಾಸ ಕೇಂದ್ರದಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಹಿಳಾ ವಿಚಾರ ಗೋಷ್ಠಿ

ಗೋಕಾಕ:ಧರ್ಮಸ್ಥಳ ಸಂಸ್ಥೆಯ ಮಹಿಳಾ ಜ್ಞಾನ ವಿಕಾಸ ಕೇಂದ್ರದಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಹಿಳಾ ವಿಚಾರ ಗೋಷ್ಠಿ 

ಧರ್ಮಸ್ಥಳ ಸಂಸ್ಥೆಯ ಮಹಿಳಾ ಜ್ಞಾನ ವಿಕಾಸ ಕೇಂದ್ರದಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಹಿಳಾ ವಿಚಾರ ಗೋಷ್ಠಿ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 6 :

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕೇಂದ್ರದಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಹಿಳಾ ವಿಚಾರ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು.
ತಾಲೂಕಿನ ಮರಡಿಮಠ, ಮೇಲ್ಮನಹಟ್ಟಿ, ಗೋಡಚನಮಲ್ಕಿ, ನಂದಗಾಂವ, ಈರನಟ್ಟಿ ಹಾಗೂ ಶಿಂಗಳಾಪೂರ ಗ್ರಾಮಗಳಲ್ಲಿ ಗೋಷ್ಠಿಗಳನ್ನು ಆಯೋಜಿಸಿ ಕೌಟುಂಬಿಕ ಸಾಮರಸ್ಯ, ಪೌಷ್ಟಿಕ ಆಹಾರ, ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರಗಳ ಕುರಿತು ತಜ್ಞರಿಂದ ಮಾಹಿತಿಯನ್ನು ನೀಡಲಾಯಿತು. ಈ ಗೋಷ್ಠಿಗಳಲ್ಲಿ ಯೋಜನಾ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ,ಸಮನ್ವಯ ಅಧಿಕಾರಿ ಸುರೇಖಾ ,ಡಾ.ನಾಗಪ್ಪ , ಡಾ‌. ಜಯಾನಂದ ಹಿರೇಮಠ , ಸುನೀತಾ ಜಂಬಗಿ,ರೇಖಾ ಕಂಬಾರ, ರಮೇಶ ಪೂಜೇರಿ, ಬಿ.ಬಿ.ಕಾಳಿನ ಸೇರಿದಂತೆ ಅನೇಕರು ಇದ್ದರು.

Related posts: