RNI NO. KARKAN/2006/27779|Monday, August 4, 2025
You are here: Home » breaking news » ಗೋಕಾಕ:ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು : ಸಚಿವ ರಮೇಶ ಜಾರಕಿಹೊಳಿ

ಗೋಕಾಕ:ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು : ಸಚಿವ ರಮೇಶ ಜಾರಕಿಹೊಳಿ 

ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು : ಸಚಿವ ರಮೇಶ ಜಾರಕಿಹೊಳಿ

ಗೋಕಾಕ ಜು 21 : ಪರಿಸರ ರಕ್ಷಣೆ ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಬೇಕೆಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಹೇಳಿದರು

ಶನಿವಾರದಂದು ಮುಂಜಾನೆ ತಾಲೂಕಿನ ಧುಪದಾಳ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಧುಪದಾಳ ಘಟಕ ಹಾಗೂ ಗ್ರಾಮ ಪಂಚಾಯತ ಧುಪದಾಳ,ಕರ್ನಾಟಕ ಅರಣ್ಯ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ “ಹಸಿರು ಧುಪದಾಳಗಾಗಿ ಒಂದು ದಿನ” , ಐದು ನೂರು ಸಸಿ ನೆಡುವ ಕಾರ್ಯಕ್ರಮ ಮತ್ತು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು

ಪರಿಸರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬರು ಸಸಿ ನೆಟ್ಟು ಅವುಗಳನ್ನು ಬೆಳೆಸಬೇಕು ಇದಕ್ಕಾಗಿ ವನಮಹೋತ್ಸವ ದಂತಹ ಕಾರ್ಯಕ್ರಮಗಳು ಯಾವುದೆ ಒಂದು ಪ್ರದೇಶಕ್ಕೆ ಸೀಮಿತವಾಗದೆ ರಾಜಾದ್ಯಂತ ನಿರಂತರವಾಗಿ ನಡೆಯಬೇಕು ಎಂದು ಸಚಿವ ರಮೇಶ ಹೇಳಿದರು

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಟಿ.ಆರ್‌.ಕಾಗಲ , ಮಡೆಪ್ಪ ತೋಳಿನವರ , ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜ , ವಲಯ ಅರಣ್ಯ ಅಧಿಕಾರಿಗಳಾದ ಸಂಕ್ರೀ , ಕೆ.ವ್ಹಿ . ವಣ್ಣೂರ , ಗ್ರಾ.ಪಂ ಅಧ್ಯಕ್ಷ ಬೆನವಾಡೆ , ಡಿ.ಎಂ ದಳವಾಯಿ , ಕೆಇಬಿಯ ಕಿರಣ ಸಣಕ್ಕಿ , ಪ್ರಕಾಶ ಡಾಂಗೆ , ಕರವೇ ಎಲ್ಲ ಪದಾಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: