RNI NO. KARKAN/2006/27779|Sunday, February 1, 2026
You are here: Home » breaking news » ಬೆಳಗಾವಿ:ಬಸ್ ಚಕ್ರದಲ್ಲಿ ಸಿಲುಕಿ ಮರಣವನ್ನೇ ಗೆದ್ದು ಬಂದ ವೃದ್ಧೆ !

ಬೆಳಗಾವಿ:ಬಸ್ ಚಕ್ರದಲ್ಲಿ ಸಿಲುಕಿ ಮರಣವನ್ನೇ ಗೆದ್ದು ಬಂದ ವೃದ್ಧೆ ! 

ಬಸ್ ಚಕ್ರದಲ್ಲಿ ಸಿಲುಕಿ ಮರಣವನ್ನೇ ಗೆದ್ದು ಬಂದ ವೃದ್ಧೆ !

ಬೆಳಗಾವಿ ಜು 20: ಸಾರ್ವಜನಿಕರು ಹಾಗೂ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಬಸ್ ಚಕ್ರದಲ್ಲಿ ಸಿಲುಕಿದ ವೃದ್ಧೆಯೋಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ಇಂದು ಬೆಳಗಾವಿಯಲ್ಲಿ ನಡೆದಿದೆ

ಬೆಳಗಾವಿ ತಾಲೂಕಿನ ಕೆ. ಹೆಚ್. ಬಾಳೇಕುಂದ್ರಿ ಗ್ರಾಮದ ನಿವಾಸಿ ಲತೀಫಾ ಅಬ್ದುಲ್ ಮಜೀದ್ ಬಾಳೆಕುಂದ್ರಿ (೭೦) ಪ್ರಾಣಾಪಾಯದಿಂದ ಪಾರಾಗಿರುವ ವೃದ್ಧೆ.
ಜಿಲ್ಲಾ ನ್ಯಾಯಾಲಯದಿಂದ ಕಾಲೇಜು ರಸ್ತೆಯ ಮಾರ್ಗವಾಗಿ ಸರ್ದಾರ ಮೈದಾನದ ಕಡೆಗೆ ಲತೀಫಾ ತಮ್ಮ ಪುತ್ರ ಇಂತಿಯಾಜ್ ಜತೆಗೆ ಸ್ಕೂಟಿ ಮೇಲೆ‌ ತೆರಳುತ್ತಿದ್ದರು. ಚನ್ನಮ್ಮ ವೃತ್ತದಲ್ಲಿ ಬಸ್ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸ್ಕಿಡ್ ಆಗಿದೆ. ಹಿಂಬದಿಯಲ್ಲಿ ಕುಳಿತಿದ್ದ ಲತೀಫಾ, ಕೆಳಗೆ ಬಿದ್ದು ಬಸ್ಸಿನ ಹಿಂದಿನ‌ ಚಕ್ರಕ್ಕೆ ಸಿಲುಕಿಕೊಂಡಿದ್ದರು. ಸ್ಥಳದಲ್ಲಿದ್ದ ಸಾರ್ವಜನಿಕರು ಚಾಲಕನ ಗಮನ‌ ಸೆಳೆದು ತಕ್ಷಣವೇ ‌ಬಸ್ ನಿಲ್ಲಿಸಿದ್ದರು. ಅಪಘಾತದಿಂದ ವೃದ್ಧೆಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು

Related posts: