RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ದಿ. 16 ರಿಂದ 21 ರ ವರೆಗೆ ಆಧಾರ ಅದಾಲತ್: ಜಿ.ಎಸ್.ಮಳಗಿ

ಗೋಕಾಕ:ದಿ. 16 ರಿಂದ 21 ರ ವರೆಗೆ ಆಧಾರ ಅದಾಲತ್: ಜಿ.ಎಸ್.ಮಳಗಿ 

ದಿ. 16 ರಿಂದ 21 ರ ವರೆಗೆ ಆಧಾರ ಅದಾಲತ್: ಜಿ.ಎಸ್.ಮಳಗಿ

ಗೋಕಾಕ ಜು 10 : ನಗರದ ಮಿನಿ ವಿಧಾನ ಸೌಧದಲ್ಲಿ ದಿ. 16 ರಿಂದ 21 ರ ವರೆಗೆ ಆಧಾರ ಅದಾಲತ್ ನಡೆಸಲಾಗುವುದೆಂದು ತಹಶೀಲದಾರ ಜಿ.ಎಸ್.ಮಳಗಿ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಆಧಾರ ಕಾರ್ಡಗೆ ಸಂಭಂದಿಸಿದ ಕುಂದುಕೊರೆತೆ ನಿವಾರಣೆ ಮಾಡಿಕೊಳ್ಳಲು ಈ ಅದಾಲತ್ ಸಾರ್ವಜನಿಕರಿಗೆ ಅನುಕೂಲಕರವಾಗಿರುತ್ತದೆ. ಆಧಾರಗೆ ಸಂಬಂಧಿಸಿದ ತಿದ್ದುಪಡಿಗಳು ಹಾಗೂ ಇತರೆ ಸಮಸ್ಯೆಗಳನ್ನು ಸ್ಥಳದಲ್ಲಿಯೇ ನಿವಾರಣೆ ಮಾಡಲಾಗುವುದು. ಇದಕ್ಕಾಗಿಯೇ ಹೆಚ್ಚುವರಿಯಾಗಿ 4 ಕೌಂಟರಗಳನ್ನು ತೆರೆಯಲಾಗವುದು ಇದರ ಪ್ರಯೋಜನೆಯನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: