RNI NO. KARKAN/2006/27779|Thursday, April 2, 2026
You are here: Home » breaking news » ಗೋಕಾಕ:ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಜಿಲ್ಲಾ ಪ್ರವಾಸ

ಗೋಕಾಕ:ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಜಿಲ್ಲಾ ಪ್ರವಾಸ 

ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಜಿಲ್ಲಾ ಪ್ರವಾಸ

ಗೋಕಾಕ ಜೂ 16 : ಪೌರಾಡಳಿತ ಹಾಗೂ ಬಂದರು ಒಳನಾಡು ಜಲಸಾರಿಗೆ ಸಚಿವ ರಮೇಶ ಜಾರಕಿಹೊಳಿ ಅವರು ದಿ. 17 ರಿಂದ 19 ರ ವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ದಿ. 17 ರಂದು ಮಧ್ಯಾಹ್ನ 12 ಗಂಟೆಗೆ ನಿಪ್ಪಾಣಿಯ ಸ್ಥವನಿಧಿ ದೇವಸ್ಥಾನದಲ್ಲಿ ಜೈನ ಸಮಾಜದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಜೆ 4 ಗಂಟೆಗೆ ಗೋಕಾಕ ನಗರಕ್ಕೆ ಆಗಮಿಸಿ ವಾಸ್ತವ್ಯ. ದಿ. 18 ರಂದು ಗೋಕಾಕ ವಿಧಾನ ಸಭಾ ಮತಕ್ಷೇತ್ರದ ಸ್ಥಳೀಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೋಕಾಕದಲ್ಲಿ ವಾಸ್ತವ್ಯ ಮಾಡುವರು. ದಿ. 19 ರಂದು ಮುಂಜಾನೆ 11.30 ಗಂಟೆಗೆ ಬೆಳಗಾವಿ ಪ್ರವಾಸ ಮಂದಿರದಲ್ಲಿ ಸಾರ್ವಜನಿಕರ ಭೇಟಿ. ಮಧ್ಯಾಹ್ನ 2.30 ಗಂಟೆಗೆ ಬೆಳಗಾವಿಯಿಂದ ನಿರ್ಗಮಿಸಿ, ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: