RNI NO. KARKAN/2006/27779|Monday, August 4, 2025
You are here: Home » breaking news » ಬೈಲಹೊಂಗಲ:ನೇಗಿನಹಾಳದಲ್ಲಿ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಆರಂಭ

ಬೈಲಹೊಂಗಲ:ನೇಗಿನಹಾಳದಲ್ಲಿ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಆರಂಭ 

ನೇಗಿನಹಾಳ ಗ್ರಾಮದ ಸರಕಾರಿ ಆಸ್ಪತ್ರೆಯಲ್ಲಿ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನಕ್ಕೆ ತಾಲೂಕಾ ಆರೋಗ್ಯಾಧಿಕಾರಿ ಡಾ. ಎಸ್.ಎಸ್ ಸಿದ್ಧನ್ನವರ ಚಾಲನೆ ನೀಡಿದರು.

ನೇಗಿನಹಾಳದಲ್ಲಿ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಆರಂಭ

ಬೈಲಹೊಂಗಲ ಜೂ 13 : ಗರ್ಭಿಣಿ ಮಹಿಳೆಯರ ಹೆರಿಗೆ ಸಮಯದಲ್ಲಿ ಗಂಡಾಂತರ ಸಂಭವಿಸುವುದನ್ನು ತಡೆಗಟ್ಟುವ ಮುಂಜಾಗೃತ ಕ್ರಮವಾಗಿ ಕೇಂದ್ರದ ವಿಶೇಷ ಆರೋಗ್ಯ ತಪಾಸನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು ಈ ಯೋಜನೆಯನ್ನು ಸರಿಯಾಗಿ ಪ್ರಚಾರಪಡಿಸಿ ಶಿಶು ಮತ್ತು ತಾಯಿಯ ಮರಣ ಪ್ರಮಾಣ ಪ್ರಮಾಣ ಕಡಿಮೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಬೈಲಹೊಂಗಲ ತಾಲೂಕಾ ಆರೋಗ್ಯಾಧಿಕಾರಿ ಡಾ. ಎಸ್.ಎಸ್ ಸಿದ್ಧನ್ನವರ ಹೇಳಿದರು.
ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ಧ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಗರ್ಭಿನಿಯರಿಗೆ ಪೌಷ್ಠಿಕ ಆಹಾರ ಕೊರತೆಯಿಂದ ಸಂಭವಿಸು ಅನಾಹುತಗಳ ತಡೆಗಟ್ಟುವ ಹಿತದೃಷ್ಠಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಸಮಯಕ್ಕೆ ಸರಿಯಾಗಿ ಸಮೀಪದ ಸರಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯರು ಪರೀಕ್ಷಿಕೊಂಡು ಸೂಕ್ತ ಪ್ರಮಾಣದ ಔಷಧಿ ಮತ್ತು ಮಾತೃಗಳನ್ನು ಸೇವಿಸುವುದರಿಂದ ಮಕ್ಕಳಿಗೆ ಮಾರಕವಾಗುವ ಒಂಬತ್ತು ರೋಗಗಳ ತಡೆಗಟ್ಟುವ ಲಸಿಕೆಗಳನ್ನು ಪಡೆಯುವಂತೆ ಸಲಹೆ ನೀಡಿದರು. ಆರೋಗ್ಯಯುತವಾದ ಮಗುವಿಗೆ ಜನ್ಮನೀಡಬಹುದು ಹಾಗೂ ತಾಯಿ ಮತ್ತು ಮಗುವಿನ ಮರಣ ಪ್ರಮಾಣವನ್ನು ತಗ್ಗಿಸಬಹುದೆಂದು ಹೇಳಿದರು. ಗ್ರಾಮದ ವೈದ್ಯಾಧಿಕಾರಿ ಡಾ ಸಂತೋಷ ಹಸರಗುಂಡಗಿ, ಡಾ ಸುಜಾತಾ ಕಿಣಗಿ ಗರ್ಭಿಣಿ ತಾಯಂದಿರನ್ನು ಪರೀಕ್ಷಿಸಿ ಸಲಹೆ ನೀಡಿದರು. ಹಿರಿಯ ಆರೋಗ್ಯ ಸಹಾಯಕ ಗಂಗಪ್ಪ ಕಲ್ಲೋಳ್ಳಿ, ಶಿವರಂಜನ ಮಡಿವಾಳರ, ಹಾಗೂ ಕಿರಿಯ ಮಹಿಳಾ ಸಹಾಯಕಿಯರಾದ ಎಂ.ಎಂ ತಲ್ಲೂರ, ಎಸ್.ಎಸ್ ಬಡಗೇರ, ಮೀನಾಕ್ಷಿ ಅಂತನ್ನವರ, ಡಿ.ಡಿ ಮುಲ್ಲಾ, ರಾಜೇಶ್ವರಿ ಗೌಳಿ, ಮಂಜುಳಾ ಕಮ್ಮಾರ, ಮಹಾದೇವಿ ಜಕಾತಿ ಹಾಗೂ ಆಶಾ ಕಾರ್ಯಕರ್ತೆಯರು ಗರ್ಭಿಣಿಯರು ಆಸ್ಪತ್ರೆಯ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

Related posts: