ಗೋಕಾಕ:2018-19ನೇ ಸಾಲಿನ ಕೃಷಿ ಅಭಿಯಾನ ಕಾರ್ಯಕ್ರಮವು ನಾಳೆಯಿಂದ ಆರಂಭ

2018-19ನೇ ಸಾಲಿನ ಕೃಷಿ ಅಭಿಯಾನ ಕಾರ್ಯಕ್ರಮವು ನಾಳೆಯಿಂದ ಆರಂಭ
ಗೋಕಾಕ ಜೂ 11 : ಕೌಜಲಗಿ ಹೋಬಳಿಯ ಮುಂಗಾರು ಹಂಗಾಮಿನ 2018-19ನೇ ಸಾಲಿನ ಕೃಷಿ ಅಭಿಯಾನ ಕಾರ್ಯಕ್ರಮವು ನಾಳೆಯಿಂದ ಆರಂಭವಾಗಲಿದ್ದು, ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಪಶು ವೈದ್ಯಕೀಯ ಇಲಾಖೆಗಳ ಮಾಹಿತಿಯನ್ನೊಳಗೊಂಡ ಮಾಹಿತಿ ರಥ ವಾಹನವು ನಾಳೆಯಿಂದ ಎರಡು ದಿನಗಳವರೆಗೆ ಕೌಜಲಗಿ ಹೋಬಳಿಯ ಎಲ್ಲ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ರೈತರಿಗೆ ಉಪಯುಕ್ತ ಮಾಹಿತಿ ನೀಡಲಿದೆ.
ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಸೋಮವಾರ ಸಂಜೆ ಕೃಷಿ ಅಭಿಯಾನ ಕಾರ್ಯಕ್ರಮದ ಮಾಹಿತಿ ರಥ ವಾಹನಕ್ಕೆ ಚಾಲನೆ ನೀಡಲಾಯಿತು.
ಯುವ ಧುರೀಣ ನಾಗಪ್ಪ ಶೇಖರಗೋಳ, ಜಿಪಂ ಸದಸ್ಯರಾದ ಶಕುಂತಲಾ ಪರುಶೆಟ್ಟಿ, ಗೋವಿಂದ ಕೊಪ್ಪದ, ಪ್ರಭಾಶುಗರ ನಿರ್ದೇಶಕ ಕೃಷ್ಣಪ್ಪ ಬಂಡ್ರೊಳ್ಳಿ, ಅಶೋಕ ಪರುಶೆಟ್ಟಿ, ಬಸವಂತ ಕಮತಿ, ಮುತ್ತೆಪ್ಪ ಕುಳ್ಳೂರ, ಬಸವರಾಜ ಮಾಳೇದವರ, ಭೂತಪ್ಪ ಗೋಡೇರ, ಜಿಪಂ ಮಾಜಿ ಸದಸ್ಯರಾದ ವಿಠ್ಠಲ ಸವದತ್ತಿ, ಭೀಮಶಿ ಮಗದುಮ್ಮ, ಎನ್‍ಎಸ್‍ಎಫ್ ಅತಿಥಿ ಗೃಹದ ನಿಂಗಪ್ಪ ಕುರಬೇಟ, ಕಲ್ಲಪ್ಪ ಕುದರಿ, ಶ್ರೀಕಾಂತ ದೇವರಮನಿ, ಲಕ್ಷ್ಮಣ ಕತ್ತಿ, ಬಸಪ್ಪ ಕಪರಟ್ಟಿ, ಸಹಾಯಕ ಕೃಷಿ ನಿರ್ದೇಶಕ ಎ.ಡಿ. ಸವದತ್ತಿ, ಕೃಷಿ ಅಧಿಕಾರಿಗಳಾದ ಎಸ್.ಬಿ. ಕರಗಣ್ಣಿ, ಝರೀನಾ ಫಿರಜಾದೆ, ಸಹಾಯಕ ಕೃಷಿ ಅಧಿಕಾರಿ ವ್ಹಿ.ಪಿ. ಹಿರೇಮಠ, ಛಾಯಾ ಪಾಟೀಲ, ಮುಂತಾದವರು ಉಪಸ್ಥಿತರಿದ್ದರು.