RNI NO. KARKAN/2006/27779|Sunday, February 15, 2026
You are here: Home » breaking news » ಗೋಕಾಕ:ತಾಲೂಕಿನಾದ್ಯಂತ ಸುರಿದ ಗುಡಗು, ಮಿಂಚು, ಗಾಳಿ ಮಿಶ್ರಿತ ಮಳೆ

ಗೋಕಾಕ:ತಾಲೂಕಿನಾದ್ಯಂತ ಸುರಿದ ಗುಡಗು, ಮಿಂಚು, ಗಾಳಿ ಮಿಶ್ರಿತ ಮಳೆ 

ತಾಲೂಕಿನಾದ್ಯಂತ ಸುರಿದ ಗುಡಗು, ಮಿಂಚು, ಗಾಳಿ ಮಿಶ್ರಿತ ಮಳೆ

ಬೆಟಗೇರಿ ಜೂ 2 : ಗೋಕಾಕ ಸೇರಿದಂತೆ ತಾಲೂಕಿನ ಬೆಟಗೇರಿ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶನಿವಾರ ಜೂ.2 ರಂದು ಸಂಜೆ 6 ಗಂಟೆ ಸುಮಾರಿಗೆ ಗುಡಗು, ಮಿಂಚು, ಸ್ವಲ್ಪ ಪ್ರಮಾಣದ ಗಾಳಿ ಮಿಶ್ರಿತ ಸುಮಾರು ಒಂದು ಗಂಟೆಗಳ ಕಾಲ ತುಂತುರ ಮಳೆಯಾಗಿ ರೈತರ ಮುಖದಲ್ಲಿ ಕಳೆ ತಂದಿದೆ. ಇಂದು ಮಳೆಯಾಗಿದ್ದರಿಂದ ಮುಂಬರುವ ದಿನಗಳಲ್ಲಿ ಮಳೆಯಾಗುವ ಆಶಾಭಾವನೆ ಇಲ್ಲಿಯ ರೈತರಲ್ಲಿ ಮೂಡಿದೆ.
ಸ್ಥಳೀಯ ರೈತರು, ವೃದ್ಧರು ದಿನ ಬೆಳಗಾದರೆ ಆಕಾಶದತ್ತ ಮುಖಮಾಡಿ ಮೇಘರಾಜನ ದಾರಿ ಕಾಯುತ್ತಾ ಮಳೆ ಇಲ್ಲದೇ ರೈತರ ಮುಖದ ಮೇಲಿನ ಕಳೆ ದಿನದಿಂದ ದಿನಕ್ಕೆ ಕುಂದುತ್ತಿರುವಾಗ ಇಂದು ಸಂಜೆ ಹೊತ್ತಿಗೆ ಸ್ವಲ್ಪ ಪ್ರಮಾಣದ ಮಳೆಯಾಗಿದ್ದರಿಂದ ಜನರು ನಿಟ್ಟಿಸಿರುಬಿಡುವಂತಾಗಿದೆ.
ಸ್ಥಳೀಯ ಹಾಗೂ ಸುತ್ತಿನ ಹಳ್ಳಿಗಳಲ್ಲಿ ಪ್ರಸಕ್ತ ವರ್ಷ ಸಂಪೂರ್ಣ ಮಳೆಯಾಗದೇ ಭೂಮಿಯಲ್ಲಿ ಈಗಿದ್ದ ಬೆಳೆಯು ಸಹ ಬಾಡಿ ಹೋಗುವ ಸ್ಥಿತಿಯಲ್ಲಿವೆ. ಈ ವರ್ಷ ಮುಂಗಾರು ಪ್ರವೇಶಿಸಿದರೂ ಕೂಡಾ ಈ ಭಾಗದಲ್ಲಿ ಬಿತ್ತನೆಯೂ ಸಹ ಭರದಿಂದ ನಡೆದಿಲ್ಲ ಹೀಗಾಗಿ ಇಲ್ಲಿಯ ರೈತರು ಮಳೆಯಾಗುವ ಹಾದಿ ಕಾಯುತ್ತಾ ಕಾಲಕಳೆಯುತ್ತಿದ್ದಾರೆ.
ಬೆಟಗೇರಿ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಇಲ್ಲಿಯ ತನಕ ಸಂಪೂರ್ಣ ಮಳೆ ಮಾತ್ರ ಆಗಿಲ್ಲ, ಬಿತ್ತನೆ ಹಾಗೂ ಕೃಷಿ ಚಟುವಟಿಕೆ ಸಹಿತ ಮಾಡಲು ಮನಸ್ಸು ಬರುತ್ತಿಲ್ಲ ಈ ಸಲ ಮಳೆ ಬರುವ ಭರವಸೆ ಸಹ ಇಲ್ಲದಂತದಾಗಿದೆ ಎಂದು ಬೆಟಗೇರಿ ಗ್ರಾಮದ ಪ್ರಗತಿ ಪರ ರೈತ ಬಸವಂತ ಕೋಣಿ ದನನೀಯ ಧ್ವನಿಯಲ್ಲಿ ಹೇಳುವ ಮಾತಾಗಿದೆ.

Related posts: