ಗೋಕಾಕ:ನಾಳೆ ನಗರದ ಕೆಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯೆ

ನಾಳೆ ನಗರದ ಕೆಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯೆ
ಗೋಕಾಕ ಮೇ 26 : ಗೋಕಾಕ ಉಪ-ವಿಭಾಗ ವ್ಯಾಪ್ತಿಯ 11ಕೆವ್ಹಿ ಫೀಡರಗಳಲ್ಲಿ ತುರ್ತು ಮಾರ್ಗ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ದಿ. 27 ರಂದು ಮುಂಜಾನೆ 10 ಗಂಟೆಯಿಂದ ಸಾಯಂಕಾಲ 6 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ನಗರದ 11ಕೆವ್ಹಿ ಎಫ್-4 ಎಕ್ಸಪ್ರೆಸ್ ಫೀಡರ ಮೇಲೆ ಬರುವ ಹಿಲ್ಲ ಗಾರ್ಡನ, ವಿದ್ಯಾ ನಗರ, ಲಕ್ಷ್ಮಿಗುಡಿ ರಸ್ತೆ, ಬಸ್ ನಿಲ್ದಾಣ ರಸ್ತೆ, ಪಾಯ ಸಾಗರ ಶಾಲೆ ರಸ್ತೆ, ಅಂಬೇಡ್ಕರ ನಗರ ಹಾಗೂ 11 ಕೆವ್ಹಿ ಎಫ್-8 ಉದಗಟ್ಟಿ ನಿರಂತರ ಜ್ಯೋತಿ ಪೀಢರ ಮೇಲೆ ಬರುವÀ ಮೆಳವಂಕಿ, ಅಡಿಬಟ್ಟಿ, ಹಡಗಿನಾಳ, ಕಲಾರಕೊಪ್ಪ, ಮಾಲದಿನ್ನಿ, ಉಪ್ಪಾರಟ್ಟಿ ಹಾಗೂ ಉದಗಟ್ಟಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಹೆಸ್ಕಾಂ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಅಧಿಕಾರಿಗಳು ಪ್ರಕಟನೆಯಲ್ಲಿ ಕೋರಿದ್ದಾರೆ.