ಗೋಕಾಕ:ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ಸೈಕಲ್ ಏರೀ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ಸೈಕಲ್ ಏರೀ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು
ಗೋಕಾಕ ಮೇ 26 : ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ವಿಪರೀತವಾಗಿ ಏರಿಸುತ್ತಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿಂದು ಪ್ರತಿಭಟನೆ ನಡೆಯಿಸಿ ತಹಶೀಲ್ದಾರರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಿದರು.
ನಗರದ ಲಕ್ಷ್ಮೀ ಚಿತ್ರಮಂದಿರ ಎದುರು ಸೇರಿದ ಕರವೇ ಕಾರ್ಯಕರ್ತರು ತಹಶೀಲ್ದಾರ ಕಚೇರಿವರೆಗೆ ಸೈಕಲ್ ಏರಿ ಬೃಹತ್ ಪ್ರಮಾಣ ಮೆರವಣಿಗೆ ನಡೆಯಿಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ವಿನೂತನವಾಗಿ ಪ್ರತಿಭಟನೆ ನಡೆಯಿಸಿದರು.
ಕಳೆದ ಕೆಲವು ವರ್ಷಗಳಿಂದ ಕೇಂದ್ರ ಸರಕಾರವು ಕಚ್ಚಾ ತೈಲ ದರದ ಬೆಲೆ ಏರಿಕೆ ಕಾರಣ ನೀಡಿ ಪರಿಕೃತ
ದರ ನಿಗದಿ ಮಾಡುತ್ತೇವೆಂದು ಹೇಳಿ ಪೆಟ್ರೋಲ್ ದರವನ್ನು ರೂ.74/- ರಿಂದ 80/- ರವರೆಗೆ ಪ್ರತಿ ಲೀಟರವರೆಗೆ ಏರಿಸಿ ಕೇಂದ್ರ ಸರಕಾರ ದೇಶದಲ್ಲಿ ಅಜಾಗೃತೆಯನ್ನು ಸೃಷ್ಟಿ ಮಾಡುತ್ತಿದೆ. ಇವರ ಈ ಕ್ರಮದಿಂದ ದೇಶದ ಕೋಟಿಗಟ್ಟಲೆ ಸಾರ್ವಜನಿಕರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇಲ್ಲಿಯವರೆಗೆ ಸ್ವಾತಂತ್ರ ಭಾರತವನ್ನು ಆಳಿದ ಯಾವುದೇ ಸರಕಾರಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಈ ತೆರನಾಗಿ ಏರಿಕೆಯಾಗಿ ದೇಶದ ಸಾರ್ವಜನಿಕರಿಗೆ ಹೊರೆಯಾಗಿಲ್ಲ. ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರಕಾರದಲ್ಲಿ ಮಧ್ಯಸ್ಥಿಕೆ ವಹಿಸಿ ದೇಶದ ಸಾರ್ವಜನಿಕರ ಹಿತದೃಷ್ಟಿ ಇಟ್ಟುಕೊಂಡು ಕೇಂದ್ರ ಸರಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ದೇಶದ ಸಮಸ್ತ ಸಾರ್ವಜನಿಕರ ಪರವಾಗಿ ಕರವೇ ಮನವಿಯಲ್ಲಿ ವಿನಂತಿಸಿದೆ.
ಈ ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಸಾಧಿಕ ಹಲ್ಯಾಳ, ಕೃಷ್ಣಾ ಖಾನಪ್ಪನವರ, ದೀಪಕ ಹಂಜಿ, ನಿಜಾಮ ನದಾಪ, ಶೆಟ್ಟೆಪ್ಪ ಗಾಡಿವಡ್ಡರ, ಮಹಾದೇವ ಮಕ್ಕಳಗೇರಿ, ಅಶೋಕ ಬಂಡಿವಡ್ಡರ, ಮುತ್ತೆಪ್ಪ ಘೋಡಗೇರಿ, ನಿಯಾಜ ಪಟೇಲ, ಹನೀಪಸಾಬ ಸನದಿ, ಮಲ್ಲು ಸಂಪಗಾರ, ಬಸು ಗಾಡಿವಡ್ಡರ, ಲಕ್ಷ್ಮಣ ಗೊರಗುದ್ದಿ, ಕೆಂಪಣ್ಣಾ ಕಡಕೋಳ, ರಮೇಶ ಕಮತಿ, ಮಲ್ಲಪ್ಪ ತಲೆಪ್ಪಗೋಳ, ಲಕ್ಕಪ್ಪ ನಂದಿ, ಫಕೀರಪ್ಪ ಗಾಡಿವಡ್ಡರ, ಅಜಿತ ಮಲ್ಲಾಪೂರೆ, ದುರ್ಗಪ್ಪ ಬಂಡಿವಡ್ಡರ, ರವಿ ನಾಂವಿ, ಅಮೀರಖಾನ ಜಗದಾಳೆ, ಸಂಜು ಗಾಡಿವಡ್ಡರ, ಅಪ್ಪಯ್ಯ ತಿಗಡಿ, ಕಿರಣ ಕೊಳವಿ, ದಸ್ತಗೀರ ಮುಲ್ಲಾ, ಕೃಷ್ಣಾ ಬಂಡಿವಡ್ಡರ, ಸುರೇಶ ಬಂಡಿವಡ್ಡರ, ದತ್ತು ಕೋಲಕಾರ, ಭಿಮಪ್ಪ ಪುಟಾಣಿ, ರಾಜು ಕೆಂಚನ್ನಗೋಳ, ರಾಜು ಕೆಂಚನಗುಡ್ಡ ಸೇರಿದಂತೆ ಇನ್ನೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.