RNI NO. KARKAN/2006/27779|Friday, July 12, 2024
You are here: Home » breaking news » ಗೋಕಾಕ:ನಗರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ : ಗಟಾರು ಪಾಲಾಗುತ್ತಿರುವ ಜೀವಜಲ. ಕರವೇ ಆರೋಪ

ಗೋಕಾಕ:ನಗರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ : ಗಟಾರು ಪಾಲಾಗುತ್ತಿರುವ ಜೀವಜಲ. ಕರವೇ ಆರೋಪ 

ನಗರಸಭೆ ಎಇಇ ತಡಸಲೂರ ರೊಂದಿಗೆ ಚರ್ಚಿಸುತ್ತಿರುವ ಕರವೇ ಕಾರ್ಯಕರ್ತರು

ನಗರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ : ಗಟಾರು ಪಾಲಾಗುತ್ತಿರುವ ಜೀವಜಲ. ಕರವೇ ಆರೋಪ

ಗೋಕಾಕ ಮೇ 26 : ನಗರಸಭೆ ಅಧಿಕಾರಿಗಳ ನಿರ್ಲಕ್ಷತನದಿಂದ ನಗರದಲ್ಲಿರುವ ನೀರು ಸಂಗ್ರಹಣಾ ಟ್ಯಾಂಕುಗಳು ಓವರ್‍ಪುಲ್ಲಾಗಿ ನೀರು ಗಟಾರು ಪಾಲಾಗುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿಂದು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಯಿಸಿ ಕರ್ತವ್ಯಲೋಪ ವೆಸಗಿದ ಸಿಬ್ಬಂದಿಗಳನ್ನು ಬದಲಾವಣೆ ಮಾಡಬೇಕೆಂದು ಒತ್ತಾಯಿಸಿದರು.
ಇಂದು ಮಧ್ಯಾಹ್ನ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿದ ಕರವೇ ಕಾರ್ಯಕರ್ತರು ನಗರ ಸಭೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ವಾರ್ಡ ನಂ. 22 ರ ಪಾಯಸಾಗರ ಶಾಲೆಯ ಹಿಂದೆ ಇರುವ ಬೃಹತ್ ಪ್ರಮಾಣದ ನೀರಿನ ಟ್ಯಾಂಕ್ ಓವರ್‍ಪುಲ್ಲಾಗಿ ಶನಿವಾರ ಮುಂಜಾನೆ 3.00 ಗಂಟೆಯಿಂದ 5.30 ಗಂಟೆಯವರೆಗೆ ನೀರು ಗಟಾರು ಪಾಲಾಗಿ ಅಂಬೇಡ್ಕರ ನಗರದ ರಸ್ತೆಗಳನ್ನು ಹಾಳು ಮಾಡಿದೆಯೆಂದು ಆರೋಪಿಸಿದರಲ್ಲದೇ ಇದಕ್ಕೆ ಕಾರಣರಾದ ಜೈನ ಕಂಪನಿಯ ಸಿಬ್ಬಂದಿ 24*7 ನೀರಿನ ನಿರ್ವಹಣೆ ನೋಡಿಕೊಳ್ಳುತ್ತಿರುವ ಬಸವರಾಜ ಮಠಪತಿ ಅವರನ್ನು ಈ ಜವಾಬ್ದಾರಿಯಿಂದ ಬದಲಾಯಿಸಿ ಪೋಲಾದ ನೀರಿನ ಪ್ರಮಾಣದಷ್ಟು ದಂಡವನ್ನು ತುಂಬಿಸುವಂತೆ ಎ.ಇ.ಇ ವಿ.ಎಸ್.ತಡಸಲೂರ ರವರ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಬಿಗಿಪಟ್ಟು ಹಿಡಿದರು. ಇದಕ್ಕೆ ಮನಿದ ಎ.ಇ.ಇ. ವಿ.ಎಸ್.ತಡಸಲೂರ ರವರು ಬಸವರಾಜ ಮಠಪತಿಗೆ ತಮ್ಮ ಕಾರ್ಯಾಲಯಕ್ಕೆ ಕರೆಯಿಸಿ ತರಾಟೆಗೆ ತಗೆದುಕೊಂಡು ಪೋಲಾದ ನೀರಿಗೆ ಆದಿನ ಕರ್ತವ್ಯಕ್ಕೆ ಇದ್ದ ಸಿಬ್ಬಂದಿಗಳಿಂದ ದಂಡ ತುಂಬಿಸಲು ಸೂಚಿಸಿದಲ್ಲದೆ ಸ್ಥಳದಲ್ಲಿಯೇ ಬಸವರಾಜ ಮಠಪತಿ ಇವರಿಂದ 20000 ಲೀಟರ ನೀರಿನ ಪ್ರಮಾಣದಷ್ಟು ಮೊತ್ತದ ಹಣವನ್ನು ದಂಡದ ರೂಪದಲ್ಲಿ ಹಣವನ್ನು ತುಂಬಿಸಿಕೊಂಡರು. ಜೈನ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರವರಿಗೆ ದೂರವಾಣಿಯ ಕರೆ ಮಾಡಿ ಬಸವರಾಜ ಮಠಪತಿರವರನ್ನು ಬದಲಾಯಿಸುವಂತೆ ಸೂಚಿಸಿದ ನಂತರ ಕರವೇಯಿಂದ ಪ್ರತಿಭಟನೆ ಹಿಂಪಡೆಯಲಾಯಿತು. ನಗರ ಸಭೆ ಅಧಿಕ್ಷಕ ಎಂ.ಎಚ್.ಅತ್ತಾರ ಈ ಸಂದರ್ಭದಲ್ಲಿ ಇದ್ದರು.
ಈ ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಸಾಧಿಕ ಹಲ್ಯಾಳ, ಕೃಷ್ಣಾ ಖಾನಪ್ಪನವರ, ದೀಪಕ ಹಂಜಿ, ನಿಜಾಮ ನದಾಪ, ಶೆಟ್ಟೆಪ್ಪ ಗಾಡಿವಡ್ಡರ, ಮಹಾದೇವ ಮಕ್ಕಳಗೇರಿ, ಅಶೋಕ ಬಂಡಿವಡ್ಡರ, ಮುತ್ತೆಪ್ಪ ಘೋಡಗೇರಿ, ನಿಯಾಜ ಪಟೇಲ, ಹನೀಪಸಾಬ ಸನದಿ, ಮಲ್ಲು ಸಂಪಗಾರ, ಬಸು ಗಾಡಿವಡ್ಡರ, ಲಕ್ಷ್ಮಣ ಗೊರಗುದ್ದಿ, ಕೆಂಪಣ್ಣಾ ಕಡಕೋಳ, ರಮೇಶ ಕಮತಿ, ಮಲ್ಲಪ್ಪ ತಲೆಪ್ಪಗೋಳ, ಲಕ್ಕಪ್ಪ ನಂದಿ, ಫಕೀರಪ್ಪ ಗಾಡಿವಡ್ಡರ, ಅಜಿತ ಮಲ್ಲಾಪೂರೆ, ದುರ್ಗಪ್ಪ ಬಂಡಿವಡ್ಡರ, ರವಿ ನಾಂವಿ, ಅಮೀರಖಾನ ಜಗದಾಳೆ, ಸಂಜು ಗಾಡಿವಡ್ಡರ, ಅಪ್ಪಯ್ಯ ತಿಗಡಿ, ಕಿರಣ ಕೊಳವಿ, ದಸ್ತಗೀರ ಮುಲ್ಲಾ, ಕೃಷ್ಣಾ ಬಂಡಿವಡ್ಡರ, ಸುರೇಶ ಬಂಡಿವಡ್ಡರ, ದತ್ತು ಕೋಲಕಾರ, ಭಿಮಪ್ಪ ಪುಟಾಣಿ, ರಾಜು ಕೆಂಚನ್ನಗೋಳ, ರಾಜು ಕೆಂಚನಗುಡ್ಡ ಸೇರಿದಂತೆ ಇನ್ನೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Related posts: