ಗೋಕಾಕ:ಮೂಡಲಗಿ ಸಿಡಿಪಿಓ ಸೇರಿದಂತೆ 65 ಜನರಿಗೆ ಕೊರೋನಾ ಸೋಂಕು ದೃಡ, ಒರ್ವ ಸೋಂಕಿತೆ ಸಾವು : ಡಾ.ಜಗದೀಶ ಜಿಂಗಿ ಮಾಹಿತಿ
ಮೂಡಲಗಿ ಸಿಡಿಪಿಓ ಸೇರಿದಂತೆ 65 ಜನರಿಗೆ ಕೊರೋನಾ ಸೋಂಕು ದೃಡ, ಒರ್ವ ಸೋಂಕಿತೆ ಸಾವು : ಡಾ.ಜಗದೀಶ ಜಿಂಗಿ ಮಾಹಿತಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 4 :
ಮೂಡಲಗಿ ಸಿಡಿಪಿಓ ಸೇರಿದಂತೆ ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಮಂಗಳವಾರದಂದು 65 ಜನರಿಗೆ ಕೊರೋನಾ ಸೋಂಕು ದೃಡಪಟ್ಟಿದ್ದು , ಗೋಕಾಕಿನ ಸಂಗಮ ನಗರದ 65 ವರ್ಷದ ವೃದ್ದೆಯೋರ್ವಳು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಅವರು ಗೋಕಾಕ ನಗರದಲ್ಲಿ -49 , ಕರಗುಪ್ಪಿ -1 , ಮೂಡಲಗಿ -2 , ನಲ್ಲಾನಟ್ಟಿ -1 , ನಾಗನೂರ -1 , ಘಟಪ್ರಭಾ -1 , ಕೊಣ್ಣೂರ -2 , ಕೌಜಲಗಿ -1, ಶಿಂಧಿಕೂರಬೇಟ -1, ಬೂದಿಹಾಳ -3, ಢವಳೇಶ್ವರ -2, ಅಂಕಲಗಿ ಗ್ರಾಮದಲ್ಲಿ ಒಬ್ಬರಿಗೆ ಕೊರೋನಾ ಸೋಂಕು ದೃಡಪಟ್ಟಿದೆ. ಸೋಂಕಿತರು ವಾಸಿಸುವ 50 ಮೀಟರ ಪ್ರದೇಶಗಳನ್ನು ಸಿಲ್ಡೌನ ಮಾಡಲಾಗಿದ್ದು ,ಸೋಂಕಿತರಿಗೆ ಆಯಾ ಸಮೀಪದ ಕೊರೋನಾ ಕೇರ ಸೆಂಟರಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ.ಜಗದೀಶ ಮಾಹಿತಿ ನೀಡಿದ್ದಾರೆ.