RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ಸಖಿ ಪಿಂಕ್ ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ವನಿತೆಯರು

ಗೋಕಾಕ:ಸಖಿ ಪಿಂಕ್ ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ವನಿತೆಯರು 

ಸಖಿ ಪಿಂಕ್ ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ವನಿತೆಯರು
ಗೋಕಾಕ ಮೇ 13 : ಮಹಿಳೆಯರಿಗಾಗಿಯೇ ಇದೇ ಮೊದಲ ಬಾರಿ ಸ್ಥಾಪಿಸಲಾದ ಸಖಿ ಪಿಂಕ ಮತಗಟ್ಟೆಗಳಲ್ಲಿ ಮಹಿಳೆಯರು ಹುರುಪಿನಿಂದ ಮತದಾನ ಮಾಡಿದರು .

ಮಹಿಳಾ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮೊದಲ ಬಾರಿಗೆ ರಾಜ್ಯದಲ್ಲಿ ಪಿಂಕ್ ಮತಗಟ್ಟೆಗಳನ್ನು ತೆರೆಯಲಾಗಿದ್ದು ಬೆಳಗಾವಿ ಜಿಲ್ಲೆಯಾದ್ಯಂತ ಒಟ್ಟು 50 ಕಡೆ , ಗೋಕಾಕ ಮತಕ್ಷೇತ್ರದಲ್ಲಿ 4 , ಅರಬಾಂವಿ ಮತಕ್ಷೇತ್ರದಲ್ಲಿ 5 ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ

ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ನಗರದ ಮಯೂರು ಸ್ಕೂಲ್ ಸ್ಥಾಪಿಸಲಾಗ ಮತಗಟ್ಟೆ ಸಂಖ್ಯೆ (120) ರಲ್ಲಿ ಮಹಿಳಾ ಮುನಿಗಳು ಸಾಲು ಸಾಲಾಗಿ ಬಂದು ಸರದಿಯಲ್ಲಿ ನಿಂತು ತಮ್ಮ ಮತದಾನ ಚಲಾಯಿಸಿದರು

ವಿಶೇಷ ಮಹಿಳಾ ಮತಗಟ್ಟೆಗಳನ್ನು ಸಂಪೂರ್ಣವಾಗಿ ಗುಲಾಬಿ ಬಣ್ಣದಿಂದ ಅಲಂಕರಿಸಲಾಗಿದೆ .

ಪಿಂಕ ಮತಗಟ್ಟೆ ಎಂದು ಗುರಿತಿಸಲಾದ ಸಖಿ ಪಿಂಕ್ ಮತಗಟ್ಟೆಯಲ್ಲಿ ಎಲ್ಲಾ ಸಿಬ್ಬಂದಿಯರು ಮಹಿಳೆಯರೇ ಇದ್ದು , ಪಿಂಕ್ ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸಿದ್ದು , ಭದ್ರತೆಗಾಗಿಯು ಸಹ ಮಹಿಳಾ ಪೊಲೀಸರನ್ನು ನೇಮಿಸಿದ್ದು ವಿಶೇಷವಾಗಿತ್ತು

Related posts: