ಗೋಕಾಕ:ರಮೇಶ ಜಾರಕಿಹೊಳಿ ಅವರನ್ನು ಗೆಲ್ಲಿಸಿ ಸಿದ್ದರಾಮಯ್ಯ ನವರನ್ನು ಮತ್ತೆ ಮುಖ್ಯಮಂತ್ರಿ ಮಾಡಿ : ಅಂಬಿರಾವ್ ಪಾಟೀಲ

ರಮೇಶ ಜಾರಕಿಹೊಳಿ ಅವರನ್ನು ಗೆಲ್ಲಿಸಿ ಸಿದ್ದರಾಮಯ್ಯ ನವರನ್ನು ಮತ್ತೆ ಮುಖ್ಯಮಂತ್ರಿ ಮಾಡಿ : ಅಂಬಿರಾವ್ ಪಾಟೀಲ
ಗೋಕಾಕ ಮೇ 5: ಸಚಿವ ರಮೇಶ ಜಾರಕಿಹೊಳಿ ಅವರನ್ನು ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಲು ಶ್ರಮಿಸಬೇಕೆಂದು ಕಾರ್ಮಿಕ ಧುರೀಣ ಅಂಬಿರಾವ್ ಪಾಟೀಲ ಹೇಳಿದರು
ಅವರು ಶನಿವಾರದಂದು ಸಾಯಂಕಾಲ ತಾಲೂಕಿನ ಮಕ್ಕಳಗೇರಿ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು
ಕಳೆದ ನಾಲ್ಕು ಅವದಿಗೆ ಸಚಿವರ ರಮೇಶ ಜಾರಕಿಹೊಳಿ ಅವರು ನೀರಾವರಿ , ಶಿಕ್ಷಣ ಆರೋಗ್ಯ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಅವರ ಅಭಿವೃದ್ಧಿ ಕಾರ್ಯಗಳನ್ನು ಮತ್ತು ಕಾಂಗ್ರೇಸ ಸರಕಾರ ನೀಡಿದ ಯೋಜನೆಗಳನ್ನು ಗಮನಿಸಿ ಇದೇ ದಿನಾಂಕ 12 ರಂದು ಜರಗುವ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಅವರನ್ನು ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡರು
ಇದೇ ಸಂದರ್ಭದಲ್ಲಿ ಗೋಕಾಕ ಮತಕ್ಷೇತ್ರದ ಶಿಲ್ತಿಭಾವಿ ,ಹೂಲಿಕಟ್ಟಿ ,ಹನುಮಾಪೂರ ಸೇರಿದಂತೆ ಅನೇಕ ಗ್ರಾಮಗಳಿಗೆ ಭೇಟಿ ನೀಡಿ ರಮೇಶ ಜಾರಕಿಹೊಳಿ ಅವರ ಪರ ಮತಯಾಚನೆ ಮಾಡಿದರು
ಜಿ.ಪಂ ಸದಸ್ಯ ಟಿ.ಆರ ಕಾಗಲ , ಮಕ್ಕಳಗೇರಿ , ಪಾಟೀಲ, ಪಾಂಡಪ್ಪ ಮೇಟಿ, ಶಿವಪುತ್ರ ದುರದುಂಡಿ, ಭರಮಣ್ಣ ಮುತ್ತೆನ್ನವರ, ಸತ್ತೆಪ್ಪ ನಾಯಕ, ರವೀಂದ್ರ ನಂದಗಾವ, ಶಿವಪ್ಪ ಸುಣಗಾರ, ಎಸ್ ಆರ್ ಹುಲಿಕಟ್ಟಿ, ಶಿವನಿಂಗ ಗೋರಬಾಳ, ದಸ್ತಗೀರ ರಾಜೆಖಾನ, ಪ್ರಕಾಶ ತೋಳಿನವರ, ಕಾಶೀವiಸಾಬ ಹುಲಿಕಟ್ಟಿ, ಮಾಯಪ್ಪ ಕೋಣಿ, ನಿಂಗಪ್ಪ ತೋಳಿನವರ, ಭರಮಪ್ಪ ಬಾನಸಿ, ಕೆಂಚಪ್ಪ ಬಾದನ್ನವರ, ಯಲ್ಲಪ್ಪ ಭೂಮನ್ನವರ, ಸಿದ್ದಪ್ಪ ಆಡಿನವರ, ವಿಠ್ಠಲ ಸನದಿ ಸೇರಿದಂತೆ ಮಹಿಳೆಯರು ನೂರಾರು ಕಾಂಗ್ರೇಸ್ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು