ಗೋಕಾಕ:ಮತ ಜಾಗೃತಿಗಾಗಿ ಸಹಿ ಆಂದೋಲನ ಕಾರ್ಯಕ್ರಮಕ್ಕೆ ತಾ.ಪಂ ಅಧಿಕಾರಿ ಎಫ್.ಜಿ.ಚಿನ್ನನವರ ಚಾಲನೆ

ಮತ ಜಾಗೃತಿಗಾಗಿ ಸಹಿ ಆಂದೋಲನ ಕಾರ್ಯಕ್ರಮಕ್ಕೆ ತಾ.ಪಂ ಅಧಿಕಾರಿ ಎಫ್.ಜಿ.ಚಿನ್ನನವರ ಚಾಲನೆ
ಗೋಕಾಕ ಏ 26 : ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ನಿಮಿತ್ಯ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಗುರುವಾರದಂದು ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮತದಾರರ ಜಾಗೃತಿ ಕುರಿತು ಕಾರ್ಯಕ್ರಮ ಜರುಗಿತು. ಮತ ಜಾಗೃತಿಗಾಗಿ ಸಹಿ ಆಂದೋಲನ ಕಾರ್ಯಕ್ರಮಕ್ಕೆ ತಾ.ಪಂ ಅಧಿಕಾರಿ ಎಫ್.ಜಿ.ಚಿನ್ನನವರ ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರ ಸಹಭಾಗಿತ್ವ ಪ್ರಜಾಪ್ರಭುತ್ವ ವ್ಯವಸ್ಥೆ ರಕ್ಷಣೆಗೆ ಅತ್ಯಗತ್ಯವಾಗಿದೆ. ಹೀಗಾಗಿ ಮಹಿಳೆಯರು ತಪ್ಪದೇ ಮತ ಚಲಾಯಿಸಬೇಕು. ಮತದಾನ ನಮ್ಮ ಪವಿತ್ರ ಹಕ್ಕು ಇದನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸೋಣ ಎಂದರು. ನಂತರ ಮತದಾರರಿಗೆ ಸ್ವೀಪ್ ಸಮಿತಿಯ ಮತದಾನದ ಮಮತೆಯ ಕರೆಯೋಲೆ ಎಂಬ ಕರಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಮ್ಯಾನೇಜರ್ ಮಳಿಮಠ, ಸುರೇಶ ಅಥಣಿ ಸೇರಿದಂತೆ ಇತರರು ಇದ್ದರು.