RNI NO. KARKAN/2006/27779|Wednesday, October 15, 2025
You are here: Home » breaking news » ಘಟಪ್ರಭಾ:ಕಲ್ಲೋಳಿ ಗ್ರಾಮದ ಇಬ್ಬರು ಯುವಕರು ಕಾಣೆ ದೂರು ದಾಖಲು

ಘಟಪ್ರಭಾ:ಕಲ್ಲೋಳಿ ಗ್ರಾಮದ ಇಬ್ಬರು ಯುವಕರು ಕಾಣೆ ದೂರು ದಾಖಲು 

ಕಲ್ಲೋಳಿ ಗ್ರಾಮದ ಇಬ್ಬರು ಯುವಕರು ಕಾಣೆ ದೂರು ದಾಖಲು

ಘಟಪ್ರಭಾ ಎ 10 : ಕಳೆದ 15 ದಿನಗಳಲ್ಲಿ ಕಲ್ಲೋಳಿ ಗ್ರಾಮದಿಂದ ಇಬ್ಬರು ಕಾಣೆಯಾದ ಬಗ್ಗೆ ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
   ಕಾಣೆಯಾದ ವ್ಯಕ್ತಿಗಳಲ್ಲಿ ಶಿವಪ್ಪ ಲಕ್ಷ್ಮಣ ಮೇತ್ರಿ (20) ಈತ ಮಾರ್ಚ್ 30ರಂದು ಔಷಧಿ ತರುತ್ತೇನೆಂದು ಮನೆಯಿಂದ ಹೋದವನು ಇನ್ನು ತನಕ ಮನೆಗೆ ಬಾರದ ಕಾರಣ ಆತನ ತಂದೆ ಲಕ್ಷ್ಮಣ ಮೇತ್ರಿ ಘಟಪ್ರಭಾ ಠಾಣೆಗೆ ದೂರು ನೀಡಿದ್ದರೆ  ಇನ್ನೊಬ್ಬ ಬಸಪ್ಪ ಕಲ್ಲಪ  ಮಗೆಪ್ಪಗೋಳ(40) ಈತ ಕಳೆದ ಮಾರ್ಚ್ 25ರಂದು ಮನೆಯಿಂದ ಹೊರಗಡೆ ಹೋದವನು ಮರಳಿ ಮನೆಗೆ ಬಂದಿಲ್ಲವೆಂದು ಆತನ ಪಾಲಕರು ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
  ಇವರ ಇಬ್ಬರ ಬಗ್ಗೆ ಮಾಹಿತಿ ದೊರತರೆ ಘಟಪ್ರಭಾ ಪೋಲಿಸ್ ಠಾಣೆ 08332-286233ಗೆ ಸಂಪರ್ಕಿಸಲು ಪೋಲಿಸರು ಕೋರಿದ್ದಾರೆ.

Related posts: