RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಲಿಂಗಾಯತ ಧರ್ಮವನ್ನು ಧಾರ್ಮಿಕ ಅಲ್ಪಸಂಖ್ಯಾತ ಧರ್ಮವೆಂದು ಮಾನ್ಯತೆ : ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸಿಗೆ ಮನವಿ

ಗೋಕಾಕ:ಲಿಂಗಾಯತ ಧರ್ಮವನ್ನು ಧಾರ್ಮಿಕ ಅಲ್ಪಸಂಖ್ಯಾತ ಧರ್ಮವೆಂದು ಮಾನ್ಯತೆ : ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸಿಗೆ ಮನವಿ 

ಕರ್ನಾಟಕ ಲಿಂಗಾಯತ ಧರ್ಮವನ್ನು ಧಾರ್ಮಿಕ ಅಲ್ಪಸಂಖ್ಯಾತ ಧರ್ಮವೆಂದು ಮಾನ್ಯತೆ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಇಲ್ಲಿಯ ರಾಷ್ಟ್ರೀಯ ಬಸವದಳ ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಲಿಂಗಾಯತ ಧರ್ಮವನ್ನು ಧಾರ್ಮಿಕ ಅಲ್ಪಸಂಖ್ಯಾತ ಧರ್ಮವೆಂದು ಮಾನ್ಯತೆ : ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸಿಗೆ ಮನವಿ

ಗೋಕಾಕ ಮಾ 16 : ಕರ್ನಾಟಕ ಲಿಂಗಾಯತ ಧರ್ಮವನ್ನು ಧಾರ್ಮಿಕ ಅಲ್ಪಸಂಖ್ಯಾತ ಧರ್ಮವೆಂದು ಮಾನ್ಯತೆ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಶುಕ್ರವಾರದಂದು ಇಲ್ಲಿಯ ರಾಷ್ಟ್ರೀಯ ಬಸವದಳ ವತಿಯಿಂದ ತಹಶೀಲ್ದಾರ ಮೂಲಕ ಸಿಎಂ ಸಿದ್ಧರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಮಹಾಮಾನವತಾವಾದಿ ಗುರು ಬಸವಣ್ಣವರಿಂದ ಸ್ಥಾಪಿತವಾದ ಜಾತಿ, ಧರ್ಮ ಮತ್ತು ವರ್ಗರಹಿತವಾದ ಲಿಂಗಾಯತ ಧರ್ಮವು ವೀರಶೈವ ಹಾಗೂ ಹಿಂದೂ ಧರ್ಮಕ್ಕಿಂತ ಎಲ್ಲ ರೀತಿಯಿಂದಲೂ ಭಿನ್ನವಾಗಿದೆ. ಸ್ವತಂತ್ರವಾಗಿದೆ. ಈ ಧರ್ಮಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನ ನೀಡಬೇಕೆಂದು ಮತ್ತು ಸ್ವತಂತ್ರ ಧರ್ಮದ ಮಾನ್ಯತೆಯನ್ನು ಪಡೆಯುವುದಕ್ಕಾಗಿ ಲಿಂಗಾಯತರು ಕಳೆದ ಹಲವಾರು ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿರುವುದನ್ನು ಸಿಎಂ ಅವರು ಗಮನಿಸಿ ತಾವು ನ್ಯಾಯಮೂರ್ತಿ ನಾಗಮೋಹನದಾಸ್ ನೇತ್ರತ್ವದಲ್ಲಿ ತಜ್ಞರ ಸಮೀತಿ ರಚಿಸಿ ವರದಿಯನ್ನು ತರಿಸಿಕೊಂಡಿರುವುದು ಶ್ಲಾಘನೀಯ.ಪ್ರಸ್ತುತ ತಜ್ಞರ ಸಮಿತಿ ವರದಿಯನ್ನು ಲಿಂಗಾಯತ ಧರ್ಮ 2007ರಲ್ಲಿ ಜೈನ,ಭೌದ್ಧ ಮತ್ತು ಸಿಖ್ಖ ಧರ್ಮಗಳಿಗೆ ಕರ್ನಾಟಕದ ಅಲ್ಪಸಂಖ್ಯಾತರ ಆಯೋಗದ ಕಾಯ್ದೆ 1994 ಕಲಂ 2(ಡಿ) ಪ್ರಕಾರ ರಾಜ್ಯ ಸರ್ಕಾರವು ಆಗ ಆದೇಶ ಹೊರಡಿಸಿದ ರೀತಿಯಲ್ಲಿಯೆ ರಾಜ್ಯದಲ್ಲಿ ಲಿಂಗಾಯತರನ್ನು ಧರ್ಮ ಮಾನ್ಯತೆ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವದಳದ ಅಧ್ಯಕ್ಷ ಉದಯ ಕರಜಗಿಮಠ,ಶಿವಲಿಂಗಪ್ಪ ಶಿರಸಂಗಿ,ಸಿ.ಎ.ಬಿಜಲಿ,ಎಂ.ಪಿ ಗುಡೇರ,ವಿ.ಎಂ.ಪರುಶೆಟ್ಟಿ,ಶ್ರೀಶೈಲ ಜಕಾತಿ, ಮಲ್ಲಿಕಾರ್ಜುನ ಕರಜಗಿಮಠ, ಪ್ರಭಾವತಿ ಖಡಕಭಾವಿ,ಗುರುಪಾದಪ್ಪ ಜಕಾತಿ,ಸಂಧ್ಯಾ ಮಠಪತಿ,ಬಸವ್ವ ಗುಗ್ಗರಿ, ಸುನಂದಾ ಕುಬಸದ, ವಸಂತಾ ಕಾತಿ ಸೇರಿಂತೆ ಇತರರು ಇದ್ದರು.

Related posts: