RNI NO. KARKAN/2006/27779|Saturday, August 2, 2025
You are here: Home » breaking news » ಬೆಳಗಾವಿ:ಭೀಮಪ್ಪ ಗಡಾದಗೆ ಮರಾಠಿಯಲ್ಲಿ ಜೀವ ಬೆದರಿಕೆ ಪತ್ರ

ಬೆಳಗಾವಿ:ಭೀಮಪ್ಪ ಗಡಾದಗೆ ಮರಾಠಿಯಲ್ಲಿ ಜೀವ ಬೆದರಿಕೆ ಪತ್ರ 

ಭೀಮಪ್ಪ ಗಡಾದಗೆ ಮರಾಠಿಯಲ್ಲಿ  ಜೀವ ಬೆದರಿಕೆ ಪತ್ರ

ಬೆಳಗಾವಿ ಮಾ 16 : ಮಾಹಿತಿ ಹಕ್ಕು  ಹಾಗೂ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಅವರಿಗೆ ಮರಾಠಾ ಯುವಕ ಮಂಡಳ ಹೆಸರಿನಲ್ಲಿ  ಮರಾಠಿಯಲ್ಲಿ  ಪತ್ರ  ಬರೆದು ಪ್ರಾಣ ಬೆದರಿಕೆ ಒಡ್ಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಗುರುವಾರ ಅಂಚೆ ಮುಖಾಂತರ  ಗಡಾದ ಅವರಿಗೆ ಪತ್ರ ಕಳುಹಿಸಿದ ಕಿಡೆಗೇಡಿಗಳು ಪ್ರಾಣ ಬೆದರಿಕೆ ಹಾಕಿದ್ದಾರೆ. ಸೂಕ್ತ ರಕ್ಷಣೆ ಒದಗಿಸುವಂತೆ ಶುಕ್ರವಾರ ಜಿಲ್ಲಾಧಿಕಾರಿಗಳಿಗೆ  ಗಡಾದ ಮನವಿ ಸಲ್ಲಿಸಿದ್ದಾರೆ.

ಬೆದರಿಕೆ ಪತ್ರವನ್ನು ನಿಪ್ಪಾಣಿ ಪಟ್ಟಣದಿಂದ ಭೀಮಪ್ಪ ಗಡಾದ ಅವರಿಗೆ ಅಂಚೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಕನ್ನಡ ಧ್ವಜ ಹೋರಾಟ, ಬೆಳಗಾವಿ ಪಾಲಿಕೆ ಮೇಲಿನ ಭಗವಧ್ವಜ ತೆರವು ಹಾಗೂ ಯಳ್ಳೂರಿನ ಬೋರ್ಡ್ ತೆರವುಗೊಳಿಸುವಂತೆ ಈ ಮೂರು ವಿಚಾರ ಪ್ರಸ್ತಾಪಿಸಿ ಬೆದರಿಕೆ ಬಂದಿದೆ. ಕಳೆದ ತಿಂಗಳ 13ರಂದು ನಿಪ್ಪಾಣಿಯಿಂದ ಪತ್ರ ಪೋಸ್ಟ್ ಮಾಡಲಾಗಿತ್ತು. ಈ ಸಂಬಂಧ ಭೀಮಪ್ಪ ಗಡಾದ್‌ ಮೂಡಲಗಿ ಠಾಣೆಯಲ್ಲಿ ಜೀವ ಬೆದರಿಕೆ ಪತ್ರ ಕುರಿತು ದೂರು ದಾಖಲಿಸಿದ್ದಾರೆ. 

ಇಂದು ಭೀಮಪ್ಪ ಗಡಾದ ಅವರು ರಕ್ಷಣೆ ಕೋರಿ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.

Related posts: