RNI NO. KARKAN/2006/27779|Monday, June 16, 2025
You are here: Home » breaking news » ಖಾನಾಪುರ:ಯಾವುದೇ ಹುದ್ದೆಯಲ್ಲಿ ಇಲ್ಲದೆಯೇ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿದ ತೃಪ್ತಿ ನನಗಿದೆ : ನಾಸೀರ ಬಾಗವಾನ

ಖಾನಾಪುರ:ಯಾವುದೇ ಹುದ್ದೆಯಲ್ಲಿ ಇಲ್ಲದೆಯೇ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿದ ತೃಪ್ತಿ ನನಗಿದೆ : ನಾಸೀರ ಬಾಗವಾನ 

ಯಾವುದೇ ಹುದ್ದೆಯಲ್ಲಿ ಇಲ್ಲದೆಯೇ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿದ ತೃಪ್ತಿ ನನಗಿದೆ : ನಾಸೀರ ಬಾಗವಾನ

ಖಾನಾಪೂರ ಮಾ 9: ತಾಲೂಕಿನಲ್ಲಿ ಯಾವುದೇ ಹುದ್ದೆಯಲ್ಲಿ ಇಲ್ಲದೆಯೇ ಸಾಕಷ್ಟು ಜನಪರ ಕಾರ್ಯಗಳನ್ನು ಈಗಾಗಲೆ ಮಾಡಿದ ತೃಪ್ತಿ ನನಗಿದೆ.400ಕ್ಕೂ ಹೆಚ್ಚು ಗುಡಿಗಳು,ಸೇತುವೆಗಳು,ರಸ್ತೆಗಳು,ಕುಡಿವ ನೀರಿಗಾಗಿ ಕೊಳವೆ ಬಾವಿಗಳು ಮುಂತಾದ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ.ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನ್ನನ್ನು ಶಾಸಕ ಎಂದು ಆರಿಸಿ ತಂದರೆ ಮಹಿಳಾ ಸಂಘಗಳ ಸಾಲದ ಸಂಪೂರ್ಣ ಬಡ್ಡಿ ಹಣವನ್ನು ಸ್ವಂತ ನಾನೇ ತುಂಬುತ್ತೇನೆ.ಅದರಂತೆ ತಮ್ಮ ಗ್ರಾಮದ ಸಕಲ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತೇನೆ ಎಂದು ನಾಸೀರ ಬಾಗವಾನ ಸಮಾರಂಭದಲ್ಲಿ ನೆರೆದ ಸ್ತ್ರೀ ಸಮೂಹವನ್ನು ಉದ್ದೇಶಿಸಿ ಮಾತನಾಡಿದರು.

ತಾಲೂಕಿನ ಮಂಗ್ಯಾನಕೊಪ್ಪ ಗ್ರಾಮದಲ್ಲಿ ಗುರುವಾರ ನಡೆದ ಗ್ರಾಮ ಮಟ್ಟದ ಮಹಿಳಾ ಸಮಾವೇಶದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಮಾವೇಶದಲ್ಲಿ ಮಂಗ್ಯಾನಕೊಪ್ಪ ಮತ್ತು ಸುತ್ತಲಿನ ಗ್ರಾಮಗಳ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಸೇರಿ,ನಾಸೀರ ಬಾಗವಾನರ ಪರ ಘೋಷಣೆ ಕೂಗಿ ಕಾಂಗ್ರೆಸ್ ಪರ ಒಲವು ತೋರಿದರು.

ಈ ಸಂದರ್ಭದಲ್ಲಿ ನಾಸೀರ ಬಾಗವಾನ ಅಭಿಮಾನಿ ಬಳಗದ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಸೇರಿ ಸಭೆಗೆ ರಂಗು ತಂದರು.

Related posts: