RNI NO. KARKAN/2006/27779|Thursday, July 3, 2025
You are here: Home » breaking news » ಗೋಕಾಕ: ಆರ್ಮಿಯಲ್ಲಿ ಕೆಲಸ ಕೊಡಿಸುವುದಾಗಿ ಮೋಸ : ಗೋಕಾಕಿನ ಸಾವಳಗಿ ಗ್ರಾಮದ ಯುವಕನ ಬಂಧನ

ಗೋಕಾಕ: ಆರ್ಮಿಯಲ್ಲಿ ಕೆಲಸ ಕೊಡಿಸುವುದಾಗಿ ಮೋಸ : ಗೋಕಾಕಿನ ಸಾವಳಗಿ ಗ್ರಾಮದ ಯುವಕನ ಬಂಧನ 

ಆರ್ಮಿಯಲ್ಲಿ ಕೆಲಸ ಕೊಡಿಸುವುದಾಗಿ ಮೋಸ : ಗೋಕಾಕಿನ ಸಾವಳಗಿ ಗ್ರಾಮದ ಯುವಕನ ಬಂಧನ

ಗೋಕಾಕ ಮೇ 23: ಆರ್ಮಿಯಲ್ಲಿ ಕೆಲಸ ಕೊಡಿಸುವುದಾಗಿ ಮುಗ್ಧ ಯುವಕರನ್ನು ವಂಚಿಸಿ ಹಣ ವಸೂಲಿ ಮಾಡಿತ್ತಿದ ಗೋಕಾಕ ತಾಲೂಕಿನ ಸಾವಳಗಿ ಗ್ರಾಮದ ಯುವಕನೋರ್ವನನ್ನು ಬೆಳಗಾವಿ ಮಾರ್ಕೆಟ್ ಠಾಣೆಯ ಪೊಲೀಸರು ಬಂಧಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ
ದೇಶ ಸೇವೆ ಮಾಡುವ ಕನಸು ಹೋತ್ತಿರುವ ಯವಕರನ್ನು ಪುಸಲಾಯಿಸಿ ನಕಲಿ ನೇಮಕಾತಿ ಆದೇಶ ಪ್ರತಿಗಳನ್ನು ಸೃಷ್ಟಸಿ ಲಕ್ಷಾಂತರ ರೂಗಳನ್ನು ವಸೂಲಿ ಮಾಡುತ್ತಿದ ಎನ್ನಲಾಗುತ್ತಿದೆ.

ಪ್ರಕರಣ ಸಂಬಂಧ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಸಾವಳಗಿ ಗ್ರಾಮದ ಶಾನೂಲ ಹತ್ತಿವಾಲೆ (23), ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಇನ್ನೂ ದೇಶ ಸೇವೆ ಮಾಡಬೇಕೆಂಬ ಬಯಕೆ ಹೊತ್ತಿದ್ದ ಸದಾಶಿವ ಮಾದರ(27) ಎಂಬ ಯುವಕ ನಕಲಿ ಆದೇಶ ಪ್ರತಿಯನ್ನು ತೆಗೆದುಕೊಂಡು ಆರ್ಮಿ ಸೇರಲು ಹೋಗಿದ್ದಾಗ ಆರ್ಮಿ ಅಧಿಕಾರಿಗಳಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.
ಇನ್ನು ಆರೋಪಿಯಿಂದ ನಕಲಿ ಆದೇಶ ಪ್ರತಿಗಳನ್ನು ತಯಾರಿಸಲು ಬಳಸುತ್ತಿದ್ದ ಶೀಲ್‌ಗಳು, ಪೇಪರ್ ಪ್ರತಿಗಳು, ವಿದ್ಯಾರ್ಥಿಗಳ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಮತ್ತು ವಿವಿಧ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ವಿರುದ್ಧ ಐಪಿಸಿ ಕಲಂ 463, 465,420,468 ಅಡಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts: